ಕಾರವಾರ: ಹಬ್ಬುವಾಡ ಹರಿದೇವನಗರದಲ್ಲಿ ಏಳು ಬೈಕ್ಗಳು ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿವೆ. ಹರಿದೇವನಗರ ಗ್ರಂಥಾಲಯ ಕಟ್ಟಡ ಸಮೀಪ ಬೈಕ್ಗಳನ್ನು ರ್ಪಾಂಗ್ ಮಾಡಲಾಗಿತ್ತು. ರಾತ್ರಿ 1.30 ರ ಹೊತ್ತಿಗೆ ಬೆಂಕಿ ಕಾಣಿಸಿದೆ. ಇನ್ನೂ ಹೆಚ್ಚಿನ ವಾಹನಗಳಿಗೆ ಬೆಂಕಿ ಹರಡುವುದನ್ನು ಸ್ಥಳೀಯರು ತಪ್ಪಿಸಿದ್ದಾರೆ.
ಹರಿದೇವ ನಗರದಲ್ಲಿ ಗುಡ್ಡದ ಮೇಲೆ ಮನೆಗಳಿರುವುದರಿಂದ ವಾಹನಗಳನ್ನು ಗ್ರಂಥಾಲಯ ಸಮೀಪ ನಿಲ್ಲಿಸಲಾಗುತ್ತಿತ್ತು. ಮಂಗಳವಾರ ರಾತ್ರಿ 7 ಬೈಕ್ಗಳು, 1 ಕಾರು 1 ರಿಕ್ಷಾವನ್ನು ಸ್ಥಳದಲ್ಲಿ ನಿಲ್ಲಿಸಲಾಗಿತ್ತು. 7 ಬೈಕ್ಗಳಿಗೆ ಮಾತ್ರ ಹಾನಿಯಾಗಿದೆ. ವಿದ್ಯುತ್ ಕಂಬದ ಕೆಳಗೆ ನಿಲ್ಲಿಸಿದ ಬೈಕ್ಗಳಿಗೆ ಹಾನಿಯಾಗಿರುವುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ದುಷ್ಕರ್ವಿುಗಳು ಬೆಂಕಿ ಹಚ್ಚಿದ ಅನುಮಾನವೂ ಇದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಷಯ ತನಿಖೆಯ ನಂತರ ಬಹಿರಂಗವಾಗಬೇಕಿದೆ.
ರಮೇಶ ಶಿವಣ್ಣಾ ಬಳಿಗಾರ್, ಶಿವಪುತ್ರಪ್ಪ ಮರ್ಲಾಪುರ, ಮುತ್ತಪ್ಪ ಶಿವಳ್ಳಿ, ಆನಂದ ಗದಗ, ಕಸ್ತೂರಿ ಸುರೇಶ ದುತದರ ಅವರ ತಲಾ 1 ಹಾಗೂ ಬೀರಪ್ಪ ಮರ್ಲಾಪುರ ಅವರ 2 ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ.