ಏಳು ದಿನದಲ್ಲಿ 668 ಡಿಡಿ ಕೇಸ್ ದಾಖಲು

blank

ಬೆಂಗಳೂರು: ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ನಗರ ಸಂಚಾರ ಪೊಲೀಸರು ಕಳೆದ ಏಳು ದಿನಗಳ ವಿಶೇಷ ಕಾರ್ಯಾಚರಣೆ ಕೈಗೊಂಡು ಪಾನಮತ್ತ ಚಾಲಕರು/ಸವಾರರ ವಿರುದ್ಧ 668 ಪ್ರಕರಣ ದಾಖಲಿಸಿದ್ದಾರೆ.
ಏ.೨೧ರಿಂದ ೨೭ರ ವರೆಗೆ ನಗರದ ೫೩ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ೪೩,೨೫೩ ವಾಹನಗಳನ್ನು ಸಪಾಸಣೆ ನಡೆಸಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕರು/ಸವಾರರ ವಿರುದ್ಧ ೬೬೮ ಪ್ರಕರಣ ದಾಖಲಿಸಿದ್ದಾರೆ.
೧.೮೯ ಲಕ್ಷ ರೂ. ದಂಡ ವಸೂಲಿ:
ಇದೇ ವೇಳೆ ಅತಿವೇಗವಾಗಿ ವಾಹನ ಚಲಾಯಿಸುವವ ಸವಾರರು/ಚಾಲಕರ ವಿರುದ್ಧವೂ ವಿಶೇಷ ಕಾರ್ಯಾಚರಣೆ ಕೈಗೊಂಡು ೧೮೫ ಪ್ರಕರಣ ದಾಖಲಿಸಿ, ೧.೮೯ ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಈ ಡ್ರಂಕ್ ಆ್ಯಂಡ್ ಡ್ರೈವ್ ಮತ್ತು ಅತಿವೇಗದ ಚಾಲನೆ ವಿರುದ್ಧ ಇನ್ನು ಮುಂದೆಯೂ ನಗರದಲ್ಲಿ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

 

Share This Article

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…

ನಿಮ್ಮ ಮುಖದಲ್ಲಿ ಬೇಡದ ಕೂದಲು ಇದೆಯೇ? ಈ ಸಲಹೆಗಳನ್ನು ಅನುಸರಿಸಿ..Unwanted Hair

Unwanted Hair : ಮುಖದ ಮೇಲೆ ಬೇಡದ ಕೂದಲು ಸಾಮಾನ್ಯ ಆದರೆ ಮಹಿಳೆಯರಿಗೆ ಮುಜುಗರದ ಸಮಸ್ಯೆಯಾಗಿದೆ.…

ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt

Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…