66.09 ಲೀಟರ್ ಮದ್ಯ ನಾಶ

ಕೊರಟಗೆರೆ: ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸಾಗಣೆ, ವಾರಾಟ ಮಾಡುವವರಿಂದ ಜಪ್ತಿ ಮಾಡಿದ್ದ ಮದ್ಯದ ಪಾಕೇಟ್‌ಗಳನ್ನು ಅಬಕಾರಿ ಆವರಣದಲ್ಲಿ ಸೋಮವಾರ ನಾಶಪಡಿಸಲಾಯಿತು.

ಪಟ್ಟಣದ ಅಬಕಾರಿ ವಲಯ ಕಚೇರಿ ಆವರಣದಲ್ಲಿ ಮಧುಗಿರಿ ಅಬಕಾರಿ ಉಪ ಅಧೀಕ್ಷಕ ಸುಭಾಶ್‌ಚಂದ್ರ, ತುಮಕೂರು ಕೆಎಸ್‌ಬಿಸಿಎಲ್
ವ್ಯವಸ್ಥಾಪಕ ಎಚ್.ಎಂ.ಗೌಡ, ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುವಾರು 50 ಸಾವಿರ ರೂಪಾಯಿ ಮೌಲ್ಯದ 66.09 ಲೀಟರ್ ಮದ್ಯವನ್ನು ಕಚೇರಿ ಆವರಣದಲ್ಲಿ ಗುಂಡಿಗೆ ಸುರಿದು ನಾಶಪಡಿಸಲಾಯಿತು.

ಅಬಕಾರಿ ಇಲಾಖೆ ಉಪ ನೀರಿಕ್ಷಕ ಅರುಣ್ ಕುವಾರ್, ವೈಷ್ಣವಿ, ಕಂದಾಯ ಇಲಾಖೆಯ ನಕುಲ್, ಅಬಕಾರಿ ಸಿಬ್ಬಂದಿ ಮಂಜುಳಾ, ಮಲ್ಲಿಕಾರ್ಜುನ್, ಪುಷ್ಪಲತಾ, ಕೊಂಡಪ್ಪ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *