ಗೋಣಿಕೊಪ್ಪಲು: ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 6 ತಂಡಗಳು ಮುನ್ನಡೆ ಪಡೆದುಕೊಂಡಿವೆ.
ಉಳುವಂಗಡ ಮತ್ತು ತೀತರಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತೀತರಮಾಡ ಕಂಬೀರಂಡ ತಂಡ ನಿಗದಿತ 6 ಓವರ್‌ಗಳಲ್ಲಿ 6ವಿಕೆಟ್ ನಷ್ಟಕ್ಕೆ 36 ರನ್‌ಗಳಿಸಿತು. ಇದಕ್ಕೆ ಉತ್ತರವಾಗಿ ಉಳುವಂಗಡ ತಂಡ 5ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಬೊಟ್ಟಂಗಡ ಮತ್ತು ಕಾವಡಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಕಾವಡಿಚಂಡ ತಂಡ 5ವಿಕೆಟ್ ನಷ್ಟಕ್ಕೆ 33ರನ್ ಗಳಿಸಲಷ್ಟೇ ಶಕ್ತವಾಯ್ತು.
ಮೇದೂರ ಮತ್ತು ಚಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಟ್ಟಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 54 ರನ್‌ಗಳಿಸಿತು. ಮೇದೂರ ತಂಡ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ದಾಸಂಡ ಮತ್ತು ನಾಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಸಂಡ ತಂಡ ನಿಗದಿತ 6 ಓವರ್‌ಗಳಲ್ಲಿ 4ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು. ನಾಪಂಡ ತಂಡ 6 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಲಷ್ಟೇ ಶಕ್ತವಾಯ್ತು.
ಪುದಿಯಂಡ ಮತ್ತು ತೆಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೆಕ್ಕಡ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ಪುದಿಯಂಡ 5 ವಿಕೆಟ್ ಕಳೆದುಕೊಂಡು 63 ರನ್ ಗಳಿಸಿತು.
ಬೊಳ್ಳಂಡ ಮತ್ತು ಜಮ್ಮಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಳ್ಳಂಡ ತಂಡ ಬಾರದ ಕಾರಣ ಜಮ್ಮಡ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.