ಸಮುದ್ರದಲ್ಲಿ ದೋಣಿ ಮುಳುಗಿ ಎಂಟು ಮಂದಿ ದುರ್ಮರಣ

ಕಾರವಾರ: ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿ ಎಂಟು ಮಂದಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರನ್ನು ಕಾರವಾರ ಹಾಗೂ ಹಾವೇರಿಯವರು ಎಂದು ಗುರುತಿಸಲಾಗಿದೆ.

ದೋಣಿಯಲ್ಲಿ ಸುಮಾರು 33 ಜನರಿದ್ದರು. ಕೂರ್ಮಗಡ ಜಾತ್ರೆಗೆ ಹೋಗಿ ವಾಪಸ್​ ಆಗುತ್ತಿದ್ದಾಗ ದೋಣಿ ಮುಳುಗಿ ಅವಘಡ ಸಂಭವಿಸಿದೆ. ಒಟ್ಟು 18 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಉಳಿದ ಏಳುಮಂದಿಗಾಗಿ  ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ.