More

  ವಿಶ್ವಕ್ಕೆ ನಿಜಗುಣ ಶಿವಯೋಗಿಗಳಿಂದ 6 ಮಹಾನ್ ಗ್ರಂಥಗಳ ಕೊಡುಗೆ

  ಹುಬ್ಬಳ್ಳಿ: ನಿಜಗುಣಶಿವಯೋಗಿಗಳು ತಮ್ಮ ಆಧ್ಯಾತ್ಮದ ಸಾಧನೆ ಜತೆಗೆ ಕನ್ನಡ ಸಾಹಿತ್ಯಕ್ಕೆ ಹಾಗೂ ವಿಶ್ವಕ್ಕೆ ಆರು ಮಹಾನ್ ಗ್ರಂಥಗಳನ್ನು ನೀಡಿದ್ದಾರೆ. ಇದಕ್ಕಾಗಿ ಅವರು ಅಧ್ಯಯನ ಮಾಡಿದ ಪುಸ್ತಕಗಳ ಸಂಖ್ಯೆ 40 ಸಾವಿರ ಎಂದು ಶಿರಹಟ್ಟಿ-ಬಾಲೆಹೊಸೂರ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

  ನಗರದ ರುದ್ರಾಕ್ಷಿಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಜಗುಣ ಶಿವಯೋಗಿಗಳ 75ನೇ ವಾರ್ಷಿಕ ಜಯಂತ್ಯುತ್ಸವ, ಬಸವಲಿಂಗೇಶ್ವರ ದೀಪೋತ್ಸವ ಹಾಗೂ ಬಸವಲಿಂಗ ಸ್ವಾಮೀಜಿಗಳ ಷಷ್ಠಬ್ದಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ನಿಜಗುಣರ ಸಾಹಿತ್ಯವನ್ನು ಅದ್ವೈತಿಗರು ಬಳಸಿಕೊಂಡರು. ಆದರೆ, ಮೊದಲಿಗೆ ನಿಜಗುಣರ ಶಾಸ್ತ್ರವನ್ನು ಪರಿಚಯಿಸಿದ್ದು ಹುಬ್ಬಳ್ಳಿ ರುದ್ರಾಕ್ಷಿ ಮಠ. ನಿಜಗುಣರು ಮಹಾರಾಜರು. ಹೀಗಿದ್ದಾಗ್ಯೂ ಅವರು ಅಧ್ಯಯನಶೀಲರಾಗಿದ್ದರು. ನಾವು ಓದಿನಿಂದ ವಿಮುಖರಾಗಿದ್ದೇನೆ. ಇದಕ್ಕೆ ಕಾರಣ ಮೊಬೈಲ್ ಫೋನ್ ಎಂದರು.

  ವಿಜಯಪುರ ಗುಣದಾಳದ ಶ್ರೀ ಡಾ. ವಿವೇಕಾನಂದ ದೇವರು, ಕನ್ನಡ ಭಾಷೆ ಉತ್ತುಂಗಕ್ಕೇರಲಿದೆ. ಇದಕ್ಕೆ ಕಾರಣ ಶರಣರ ವಚನ ಸಾಹಿತ್ಯ, ತತ್ವಪದಗಳು ಹಾಗೂ ನಿಜಗುಣಶಿವಯೋಗಿಗಳ ಷಟ್​ಶಾಸ್ತ್ರಗಳು ಎಂದರು.

  ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಅದೇ ಸನ್ಮಾರ್ಗ. ಮನುಷ್ಯ ಜನ್ಮಕ್ಕೆ ಬಂದ ಮೇಲೆ ಗುರುವಿನ ಆಶೀರ್ವಾದ ಪಡೆಯಬೇಕು. ಗುರುವಿನ ಉಪದೇಶ ಪಡೆಯದ ಹೊರತು ನಮಗೆ ಮುಕ್ತಿ ಇಲ್ಲ ಎಂದು ಪ್ರವಚನ ನೀಡಿದರು.

  ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ದೊಡ್ಡವಾಡ ಹಿರೇಮಠದ ಶ್ರೀ ಜಡೆ ಸಿದ್ದೇಶ್ವರ ಶಿವಾಚಾರ್ಯರು, ಗುರುಗುಂಟದ ಶ್ರೀ ಸದಾನಂದ ಶಿವಾಚಾರ್ಯರು, ಶ್ರೀ ಚನ್ನಮಲ್ಲದೇವರು, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಾಣದ, ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ನಿಗುಣ ಶಿವಯೋಗಿಗಳ ಜಯಂತ್ಯುತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪ್ರಮುಖರಾದ ಮಹಾಂತೇಶ ಗಿರಿಮಠ, ಚಂದ್ರಶೇಖರ ಗೋಕಾಕ, ಮಲ್ಲಿಕಾರ್ಜುನ ಶಿರಗುಪ್ಪಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts