ಸಂಕ್ರಾಂತಿ ಆಚರಣೆಗೆಂದು ತೆರಳಿದ್ದ ದೋಣಿ ಮುಗುಚಿ ಆರು ಜನರು ಸಾವು

ನಂದುರ್ಬರ್‌: ನರ್ಮದಾ ನದಿಯಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಜನರು ಮೃತಪಟ್ಟಿದ್ದಾರೆ.

ಮಹರಾಷ್ಟ್ರದ ನಂದುರ್ಬರ್‌ ಜಿಲ್ಲೆಯ ನರ್ಮದಾ ನದಿಯಲ್ಲಿ ಘಟನೆ ನಡೆದಿದ್ದು, 36 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕರ ಸಂಕ್ರಾಂತಿ ಅಂಗವಾಗಿ ನದಿಯ ಆರಾಧನಾ ಆಚರಣೆಗಳನ್ನು ನಡೆಸಲೆಂದು ದೋಣಿಯಲ್ಲಿ ಸುಮಾರು 60 ಜನರನ್ನು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ದೋಣಿಯು ಮುಗುಚಿದ್ದು, ಬುಡಕಟ್ಟು ಜನರೇ ಅಧಿಕವಾಗಿರುವ ಜಿಲ್ಲೆಯ ಆರು ಜನರು ಮೃತಪಟ್ಟಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯುತ್ತಿದ್ದದ್ದೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. (ಏಜೆನ್ಸೀಸ್)