Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

6.26 ಕೋಟಿ ಠೇವಣಿ ಖೋತಾ!

Friday, 13.07.2018, 3:00 AM       No Comments

ತುಮಕೂರು : ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆ ಬಾಡಿಗೆದಾರರು ನೀಡಿರುವ ಠೇವಣಿ 6.57 ಕೋಟಿ ರೂ. ಕಾಣೆಯಾಗಿರುವ ದೊಡ್ಡ ಹಗರಣ ಬಯಲಾಗಿದೆ.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರವಿಕುಮಾರ್, ಪಾಲಿಕೆ ಖಾತೆಯಿಂದ ಹಣ ಕಾಣೆಯಾಗಿರುವ ಬಗ್ಗೆ ಗಮನ ಸೆಳೆದರು. ಪಾಲಿಕೆ ಲೆಕ್ಕ ಶಾಖೆಯಲ್ಲಿ ಮಾಹಿತಿಯೇ ಇಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಯಿತು.

ಖಾಸಗಿ ಬಸ್ ನಿಲ್ದಾಣದ 122, ಎಸ್​ಎಸ್ ಪುರಂ 55 ಹಾಗೂ ಶಿರಾಗೇಟ್ ಬಳಿಯ 22 ವಾಣಿಜ್ಯ ಮಳಿಗೆ ಬಾಡಿಗೆದಾರರ ಠೇವಣಿ ಖಾತೆ ಇಂಡಿಯನ್ ಬ್ಯಾಂಕ್ ಹಾಗೂ ಎಸ್​ಬಿಐ ಮುಖ್ಯಶಾಖೆಯಲ್ಲಿದ್ದು, ಈ ಖಾತೆಯಲ್ಲಿ ಕೇವಲ 31 ಲಕ್ಷ ರೂ. ಉಳಿದಿದ್ದು, ಉಳಿದ ಹಣದ ಬಗ್ಗೆ ಮಾಹಿತಿ ಇಲ್ಲ. ಠೇವಣಿ ಮೊತ್ತವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಹಾಗಾಗಿ ದೊಡ್ಡ ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ವನಿಸಲಾಯಿತು.

2012ರಲ್ಲಿ 8 ಲಕ್ಷ ರೂ. ಠೇವಣಿ ಕಟ್ಟಿಸಿಕೊಂಡು ಅಂಗಡಿ ಕರಾರು ಹಾಗೂ ಕೀ ನೀಡದಿರುವ ಬಗ್ಗೆ ಸದಸ್ಯ ನಯಾಜ್ ಅಹಮದ್ ಗಮನಕ್ಕೆ ತಂದರು. ಅವರಿಗೆ ಕೂಡಲೇ ಮಳಿಗೆ ನೀಡಲು ಸದಸ್ಯ ಸುಧೀಶ್ವರ್ ಸೂಚಿಸಿದರು.

ಹಳೆಯ ಮನೆ ಕೆಡವಿ ಹೊಸ ಮನೆ ನಿರ್ವಿುಸಿಕೊಳ್ಳಲು ಪಾಲಿಕೆಯಿಂದ ನೀಡಲಾಗುವ ಅನುಮತಿಗೆ ಅಧಿಕಾರಿಗಳು ಕೊಕ್ಕೆ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿ ಸದಸ್ಯ ಟಿ.ಆರ್.ನಾಗರಾಜು, ಕರುಣಾರಾಧ್ಯ, ನಾಗರಾಜರಾವ್ ದೂರಿದರು.

ಆನ್​ಲೈನ್ ಮೂಲಕ ಲೈಸೆನ್ಸ್​ಗೆ 843 ಜನ ಅರ್ಜಿ ಸಲ್ಲಿಸಿದ್ದು, ಕುಂಟು ನೆಪ ಮಾಡಿಕೊಂಡು 201 ಅರ್ಜಿ ವಜಾಗೊಳಿಸಲಾಗಿದೆ. ತುಂಬ ಹಳೆಯ ಕಟ್ಟಡಕ್ಕೆ ಅಧಿಕಾರಿಗಳು ಕೇಳಿರುವ ದಾಖಲಾತಿ ಒದಗಿಸುವುದು ಅಸಾಧ್ಯವಾಗಿದ್ದು, ಕೂಡಲೇ ಆನ್​ಲೈನ್ ಅರ್ಜಿ ಸಲ್ಲಿಕೆ ರದ್ದು ಮಾಡಬೇಕು ಎಂಬ ಆಗ್ರಹಕ್ಕೆ ಮೇಯರ್ ಮಣಿದರು.

ಗುಬ್ಬಿ ಗೇಟ್ ವೃತ್ತದ ಯುಜಿಡಿ ಸಮಸ್ಯೆ ಬಗ್ಗೆ ಸದಸ್ಯ ನಾಗೇಶ್ ಗಮನ ಸೆಳೆದರು. ಅಮಾನಿಕೆರೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಆರಂಭಿಸಿದರೆ ನಗರದ ಯುಜಿಡಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸದಸ್ಯ ರಾಜಣ್ಣ ಸಲಹೆ ನೀಡಿದರು.

ರೈಸಿಂಗ್ ಮೈನ್​ನಿಂದ ಮನೆಗಳಿಗೆ ಪಡೆದಿರುವ ನೀರಿನ ಸಂಪರ್ಕ ತೆಗೆಯಬೇಕು ಎಂದು ಸದಸ್ಯ ಮಂಜುಳಾ ಆಗ್ರಹಿಸಿದರು. ಬಡುವನಹಳ್ಳಿ ಕರೆಯಲ್ಲಿ ಹೂಳು ತೆಗೆಯಲು ಟೆಂಡರ್ ಕರೆಯಲಾಗಿದ್ದ 60 ಕೋಟಿ ರೂ. ಬಳಸದೆ, ದುಪ್ಪಟ್ಟು ನೀರು ಸಂಗ್ರಹಿಸಲು ಇದ್ದ ಅವಕಾಶವನ್ನು ಇಂಜಿನಿಯರ್​ಗಳು ತಪ್ಪಿಸಿದ್ದಾರೆ ಎಂದು ಸದಸ್ಯ ರವಿ ತರಾಟೆಗೆ ತೆಗೆದುಕೊಂಡರು.

ಕೆಲವು ಕಾಮಗಾರಿಗಳ ಬಿಲ್ ಫೈಲ್ ಕಾಣೆಯಾಗಿರುವ ಬಗ್ಗೆ ಕರುಣಾರಾಧ್ಯ, ರಸ್ತೆಯಲ್ಲಿರುವ ಗುಂಡಿಗಳ ಬಗ್ಗೆ ನಯಾಜ್ ಅಹಮದ್, ಕೆರೆ ಅಭಿವೃದ್ಧಿಗೆ ಸಂಗ್ರಹಿಸುವ ತೆರಿಗೆ ಹಣ ಬಳಕೆಯಾಗದ ಬಗ್ಗೆ ಇಂದ್ರಕುಮಾರ್ ಮಾತನಾಡಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಉಪಮೇಯರ್ ಎಂ.ಆರ್.ಜಯಲಕ್ಷ್ಮೀ, ಇಇ ತಿಪ್ಪೇರುದ್ರಸ್ವಾಮಿ ಇದ್ದರು.

ಶುದ್ಧ ನೀರಿನ ಘಟಕ ಕಾಪೋರೇಟರ್ಸ್ ಲಾಭಕ್ಕೆ! :ಪಾಲಿಕೆಯಿಂದ ನಿರ್ವಿುಸಿರುವ 12 ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಸದಸ್ಯರೇ ವಹಿಸಿಕೊಂಡು ಆದಾಯ ಪಡೆಯುತ್ತಿರುವ ಬಗ್ಗೆ ಇಂಜಿನಿಯರ್ ಈರಣ್ಣ ಹೇಳಿದರು. 20 ಲೀಟರ್ ನೀರಿಗೆ 12 ರೂ. ಪಡೆಯುತ್ತಿದ್ದಾರೆ ಎಂದು ಸದಸ್ಯ ಬಾಲಕೃಷ್ಣ ಅವರ ಮಾತಿಗೆ ಇಂಜಿನಿಯರ್ ತಿಳಿಸಿದ ಮಾಹಿತಿ ಸದಸ್ಯರ ಬಂಡವಾಳ ಬಯಲುಗೊಳಿಸಿತು. ಎಲ್ಲ ಆರ್​ಒ ಪ್ಲಾಂಟ್​ಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ನೀಡುವಂತೆ ಮೇಯರ್ ಸುಧೀಶ್ವರ್ ಸೂಚಿಸಿದರು.

ಸಂಸದ ಎಸ್ಪಿಎಂ ಪಾಠ :ಪಾಲಿಕೆ ಆಯುಕ್ತರು ಸಭೆಗೆ ಗೈರಾಗಿದ್ದ ಕಾರಣ, ಕೆಲ ಸದಸ್ಯರು ಸಭೆ ನಡೆಸುವುದಕ್ಕೆ ಆಕ್ಷೇಪಿಸಿ 15 ನಿಮಿಷ ಪ್ರತಿಭಟಿಸಿದರು. ಎಲ್ಲವನ್ನೂ ಮನಿಸಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸಭಾ ನಡಾವಳಿ ಬಗ್ಗೆ ಸದಸ್ಯರಿಗೆ ಪಾಠ ಮಾಡಿದರು.

ವಿಧಾನಸಭೆಯಲ್ಲಿ ಕಾಲಿಂಗ್ ಆಫ್ ಅಟೆನ್ಷನ್ ಎಂಬ ಸಭಾ ನಡಾವಳಿಯಂತೆ ಅಧಿಕಾರಿ ಅಲ್ಲಿಗೆ ಹಾಜರಾಗಿದ್ದಾರೆ. ಈ ಕಾರಣಕ್ಕೆ ಸಭೆ ಮುಂದೂಡಲು ಸಾಧ್ಯವಿಲ್ಲ. ಅವರೇ ಉತ್ತರಿಸುವ ಪ್ರಶ್ನೆಗಳಿದ್ದರೆ ಅದನ್ನು ಇನ್ನೊಂದು ದಿನ ರ್ಚಚಿಸಿ. ಗಂಭೀರ ವಿಚಾರದ ಚರ್ಚೆಗೆ ಸಭೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

Back To Top