22.8 C
Bengaluru
Saturday, January 18, 2020

ಅಮೇರಿಕಾದ ನಾವಿಕ ವಿಶ್ವ ಸಮ್ಮೇಳನದಲ್ಲಿ ವಿಜೃಂಭಿಸಿದ “ಕನ್ನಡ-ಕಲಿ” ಕಾರ್ಯಕ್ರಮ

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

“ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡ ಭಾಷೆ ಕಲಿತಾ ಇರು ಮತ್ತು ಇತರರಿಗೆ ಕಲಿಸುತ್ತಿರು” ಎಂಬ ಘೋಷಾ ವಾಕ್ಯದಿಂದ ಆರಂಭವಾದ ಕಾರ್ಯಕ್ರಮದಲ್ಲಿ ವಿಶ್ವದ ನಾನಾ ಮೂಲೆಗಳಿಂದ ಆಗಮಿಸಿದ್ದ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ನೃತ್ಯ, ಸಂಗೀತ, ನಾಟಕ, ಕಲೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆದವು.


ಇದು ಅಮೇರಿಕಾದ ಸಿನ್ಸಿನಾಟಿ ನಗರದಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ನಡೆದ 5 ನೇ ನಾವಿಕ ವಿಶ್ವ ಸಮ್ಮೇಳನ ದ ವಿಶೇಷ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ವರೆಗೆ ಸಮ್ಮೇಳನ ಆಯೋಜಿಸಿದ್ದರು.
ಬೆಂಕಿ ಬಸಣ್ಣನವರ ಅಧ್ಯಕ್ಷತೆ ವಹಿಸಿದ್ದ ” ಕನ್ನಡ-ಕಲಿ” ಕಾರ್ಯಕ್ರಮ ನಾವಿಕದ ಪ್ರಮುಖ ಆಕರ್ಷಣೆಯಾಗಿತ್ತು. ವಿಶ್ವದ ಯಾವ ಮೂಲೆಯಲ್ಲಿದ್ದರೂ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡುವಂತಹ “ಆನ್ ಲೈನ್ -ಕನ್ನಡ -ಶಾಲೆ”ಗಳನ್ನು ಪ್ರಾರಂಭಿಸುವ ಮಹಾನ್ ಗುರಿಯನ್ನು ಶ್ರೀ ಬೆಂಕಿ ಬಸಣ್ಣ ಸಮ್ಮೇಳನದಲ್ಲಿ ಪ್ರಕಟಿಸಿದರು. ನಮ್ಮ ಹೆಮ್ಮೆಯ ಯುವ ಸಂಸದರಾದ ತೇಜಸ್ವಿ ಸೂರ್ಯ, ಕ್ಯಾಲಿಫೋರ್ನಿಯಾದ ಶಿವಗೌಡರ್ ವಿರಚಿತ ಕನ್ನಡ-ಕಲಿ ಪಠ್ಯ ಸಂಪುಟಗಳನ್ನು ಅಮೇರಿಕಾದಲ್ಲಿ ಬಿಡುಗಡೆ ಮಾಡಿದರು.

ನವೀನ್​ ಹನುಮಾನ್ ಸೃಷ್ಟಿಸಿದ www.kannadakaliyona.com ವೆಬ್ ಸೈಟ್​ ಅನ್ನು ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಚನ್ನೇಗೌಡರು ಲೋಕಾರ್ಪಣೆ ಮಾಡಿದರು. ಅಮೇರಿಕಾದಲ್ಲಿ ಉಚಿತವಾಗಿ ಕನ್ನಡ ಕಲಿಸುವ ಎಲ್ಲಾ ಸ್ವಯಂಸೇವಕ ಶಿಕ್ಷಕರನ್ನು ವೇದಿಕೆಯ ಮೇಲೆ ಗೌರವಿಸಲಾಯಿತು. ಮಕ್ಕಳಿಗೆ ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಹಿರಿಯರಿಗೆ ರಸಪ್ರಶ್ನೆ ಸ್ಪರ್ಧೆ… ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಎಲ್ಲ ಕಾರ್ಯಕ್ರಮಗಳಲ್ಲೂ ಮಕ್ಕಳು ಮತ್ತು ಪಾಲಕರು ಅತೀ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳಿಂದ ನಾಡು ನುಡಿಗೆ ಸಂಬಂಧಪಟ್ಟಂತೆ ಸಮೂಹ ಗಾಯನ ಮತ್ತು ಪ್ರತಿಭಾ ಪ್ರದರ್ಶನ ನಡೆಯಿತು. ಅಮೇರಿಕಾದಲ್ಲಿ ಉಚಿತವಾಗಿ ಕನ್ನಡ ಕಲಿಸುವ ಎಲ್ಲಾ ಸ್ವಯಂಸೇವಕ ಶಿಕ್ಷಕರನ್ನು ವೇದಿಕೆಯ ಮೇಲೆ ಗೌರವಿಸಲಾಯಿತು .
ಕನ್ನಡ ಕಲಿ ಶಿಕ್ಷಕರಾದ ಅಶೋಕ್ ಕಟ್ಟೀಮನಿಯವರು ಮಾತನಾಡಿ, ತಮ್ಮ ಕನ್ನಡ ಕಲಿ ಶಾಲೆಗಳನ್ನು ತೆರೆಯಲು ಮತ್ತು ಅದನ್ನು ನಡೆಸಲು ಪಟ್ಟ ಶ್ರಮವನ್ನು ವಿವರಿಸಿದರು.

ಕನ್ನಡ ಕಲಿ ಕಾರ್ಯಕ್ರಮದ ಅಧ್ಯಕ್ಷರಾದ ಬೆಂಕಿ ಬಸಣ್ಣ ಅವರು ಮಾತನಾಡಿ, ವಿಶ್ವದ ಯಾವ ಮೂಲೆಯಲ್ಲಿದ್ದರೂ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸು ಕೊಡುವಂತಹ “ಆನ್ ಲೈನ್ -ಕನ್ನಡ -ಶಾಲೆ”ಗಳನ್ನು ಪ್ರಾರಂಭಿಸುವ ದೂರದೃಷ್ಟಿ ಮತ್ತು ಮಹಾನ್ ಕನಸನ್ನು ಹಂಚಿಕೊಂಡರು. ಅಮೆರಿಕಾದ ಅದೆಷ್ಟೋ ಚಿಕ್ಕ ಊರುಗಳಲ್ಲಿ ಕನ್ನಡ ಶಾಲೆಗಳೇ ಇಲ್ಲ… ಇದ್ದರೂ ಸಹ, ಟ್ರಾಫಿಕ್ ಸಮಸ್ಯೆಗಳಿಂದ ಮಕ್ಕಳು ಸರಿಯಾಗಿ ಭಾಗವಹಿಸುತ್ತಿಲ್ಲ. “ಆನ್ ಲೈನ್ -ಕನ್ನಡ -ಶಾಲೆ”ಗಳು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತವೆ ಎಂದರು.
ಇದಕ್ಕೆ ಅಮೆರಿಕಾದ ವಿವಿಧ ಭಾಗಗಳಿಂದ ಆಯ್ಕೆ ಮಾಡಿದ ಒಂದು ಶಿಕ್ಷಕ ವೃಂದವನ್ನು ರಚಿಸಬೇಕಾಗುತ್ತದೆ. ಫ್ಲೋರಿಡಾ ರಾಜ್ಯದ, ಮಹಾನ್ ದಾನಿಗಳಾದ ಡಾ|| ರಾಮಪ್ಪ ನವರು ಬೆಂಕಿ ಬಸಣ್ಣರವರ “ಆನ್ ಲೈನ್ -ಕನ್ನಡ -ಶಾಲೆ”ಗಳನ್ನು ಪ್ರಾರಂಭಿಸುವ ಕನಸನ್ನು ಮನಪೂರ್ತಿ ಮೆಚ್ಚಿ, ಹೃದಯ ತುಂಬಿ ಪ್ರೋತ್ಸಾಹಿಸಿದರು. ಆ ಕನಸನ್ನು ಸಾಕಾರ ಗೊಳಿಸಲು ವೇದಿಕೆ ಮೇಲೆಯೇ $5000 ದಾನ ಮಾಡಿದರು. ಮುಂದಿನ ದಿನಗಳಲ್ಲಿ ನಾವಿಕ ಸಂಸ್ಥೆಯ ಅಧ್ಯಕ್ಯರಾದ ಸುರೇಶ ರಾಮಚಂದ್ರರ ಮಾರ್ಗದರ್ಶನದಲ್ಲಿ “ಆನ್ ಲೈನ್ -ಕನ್ನಡ -ಶಾಲೆ”ಗಳಿಗೆ ಚಾಲನೆ ದೊರೆಯಲಿದೆ.

ಕಾರ್ಯಕ್ರಮದ ಉದ್ದೇಶ: ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಸಬೇಕು ಎನ್ನುವುದು ನಾವಿಕ ಸಂಸ್ಥೆಯ ಒಂದು ಮುಖ್ಯ ಧ್ಯೇಯೋದ್ದೇಶ. ಕನ್ನಡವನ್ನು ಕೇವಲ ಆಡುಭಾಷೆಗೆ ಸೀಮಿತಗೊಳಿಸದೆ, ಮುಂದಿನ ಪೀಳಿಗೆ ಕನ್ನಡವನ್ನು ಓದಲು, ಬರೆಯಲು ಕಲಿತು, ಕನ್ನಡದ ಶ್ರೀಮಂತ ಸಾಹಿತ್ಯವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಒಂದು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಮತ್ತು ಸರಿಯಾಗಿ ಆಲೋಚನೆ ಮಾಡುವುದನ್ನು ಕಲಿಯಬೇಕು ಎಂಬುದು ನಾವಿಕದ ಉದ್ದೇಶ.

ಕುವೆಂಪು ಅವರು ತಮ್ಮ “ಮನುಜಮತ ವಿಶ್ವ ಪಥ” ಪುಸ್ತಕದಲ್ಲಿ ಹೇಳುವಂತೆ, ಶೇಕ್ಸ್​ಪಿಯರ್ ಮಹಾಕವಿ ಹುಟ್ಟುವುದಕ್ಕೆ 600 ವರ್ಷ ಮೊದಲೇ ಮಹಾಕವಿ ಪಂಪ ಜನಿಸಿದ್ದರು ಎಂಬುದನ್ನು ನೆನೆದರೆ ನಮಗೆ ಸಾಹಿತ್ಯದ ಹಿರಿಮೆ ಗರಿಮೆ ಇನಿತಾದರೂ ಮನೋಗೋಚರವಾಗಬಹುದು. ಇಂತಹ ಶ್ರೀಮಂತ ಸಾಹಿತ್ಯದ ಸವಿಯನ್ನ ನಮ್ಮ ಮುಂದಿನ ಪೀಳಿಗೆಯವರು ಸವಿಯಬೇಕು ಎಂಬುದೇ ನಾವಿಕಾದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ನಾವಿಕವೂ ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಸಬೇಕು ಎಂದು “ಕನ್ನಡ ಕಲಿ” ಕಾರ್ಯಕ್ರಮವನ್ನು ಮೊದಲಿನಿಂದಲೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಅಮೇರಿಕದ ಬೇರೆ ಬೇರೆ ರಾಜ್ಯದಲ್ಲಿರುವ ಹಲವಾರು ಕನ್ನಡ ಸಂಘ ಸಂಸ್ಥೆಗಳು, ತಮ್ಮ ಸಂಘದ ವತಿಯಿಂದ ಕನ್ನಡ ಶಾಲೆಗಳನ್ನು ತೆರೆದಿದ್ದಾರೆ. ಈ ಶಾಲೆಗಳ್ಳಲ್ಲಿ ನಿರಂತರವಾಗಿ ಕನ್ನಡ ಕಲಿಯುವಿಕೆ ನಡೆಯುತ್ತದೆ. ಈ ಶಾಲೆಗಳನ್ನು ನಡೆಸುವ ಜವಾಬ್ದಾರಿಯನ್ನು ಅಲ್ಲಿಯ ಸ್ಥಳೀಯ ಕನ್ನಡ ಸಂಘದ ಸದಸ್ಯರೇ ನಿರ್ವಹಿಸುತ್ತಾರೆ. ಹೀಗೆ ವರ್ಷ ಪೂರ್ತಿ ಮಕ್ಕಳು ನಿರಂತರವಾಗಿ ಕನ್ನಡ ಕಲಿಯುತ್ತಾರೆ. ಅವರು ಹೀಗೆ ಕಲಿತಿದ್ದನ್ನು ಪ್ರದರ್ಶಿಸಲು ನಾವಿಕ ತನ್ನ ವಿಶ್ವ ಸಮ್ಮೇಳನಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
ಈ ಬಾರಿಯ ಕನ್ನಡ ಕಲಿ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದವರು ಬೆಂಕಿ ಬಸಣ್ಣ ಮತ್ತು ಅವರ ತಂಡದವರಾದ, ಸಹ-ಸಂಚಾಲಕಿ ಪುಷ್ಪಲತಾ ವೆಂಕಟರಾಮನ್, ಉಪಾಧ್ಯಕ್ಷ ನವೀನ್​ ಹನುಮಾನ್, ಶಿವಗೌಡರ್, ಸವಿತಾ ರವಿಶಂಕರ್ ಮತ್ತು ಶಿವಕುಮಾರ್ ಬ್ಯಾಡಗಿ .
ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರು: ಪ್ರಕೃತಿ , ರಾಮ್ ಶ್ರೀವತ್ಸ ಮತ್ತು ಪ್ರಣೀತಿ,
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರು: ಪ್ರಕೃತಿ, ಪ್ರಜ್ಞಾ ಗೌಡರ್ ಮತ್ತು ಇಂಚರ ಹೊಸನಗರ
ರಸಪ್ರಶ್ನೆ ಕಾರ್ಯಕ್ರಮದ ವಿಜೇತರು: ಸಪ್ತಗಿರಿ ಬಚ್ಚು , ಕೃತಿ ಅನಿಲ್, ಮತ್ತು ಭೇಷಜ
– ಶ್ರೀ ನವೀನ ಹನುಮಾನ್, ಪಿಟ್ಸ್ ಬರ್ಗ್

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...