PHOTOS | 5ನೇ ಹಂತದ ಲೋಕಸಭಾ ಚುನಾವಣೆ: ಮತದಾನ ಮಾಡಿದ ಕಣದ ಕಲಿಗಳು, ಗಣ್ಯರು

ನವದೆಹಲಿ: ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಐದನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ರಾಜನಾಥ್​ ಸಿಂಗ್​, ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಸ್ಪರ್ಧಿಸಿರುವ ರಾಯ್​ಬರೇಲಿ ಕ್ಷೇತ್ರಗಳೂ ಸೇರಿವೆ. ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ನಾಯಕರಾದ ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​, ಪತ್ನಿ ಗಾಯತ್ರಿ ರಾಥೋಡ್​, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್​, ಕೇಂದ್ರ ಸಚಿವ, ಹಜಾರಿಬಾಗ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಂತ್​ ಸಿನ್ಹಾ, ಮಾಜಿ ಕೇಂದ್ರ ಸಚಿವ ಯುಶವಂತ ಸಿನ್ಹಾ ಹಾಗೂ ಪತ್ನಿ ನೀಲಿಮಾ ಸಿನ್ಹಾ ಮತದಾನ ಮಾಡಿದರು.