ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದ ೫ಎ ಸೈಡ್ ಮಹಿಳಾ ಪಂದ್ಯಾವಳಿಯಲ್ಲಿ ಬುಧವಾರ ೧೭ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೨ರಲ್ಲಿ ತೀತಿರ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಚೆಯ್ಯಂಡ ತಂಡ ಗೆಲುವು ಸಾಧಿಸಿತು. ಚೇನಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಆದೇಂಗಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ತೆಕ್ಕಡ ಗೆಲುವು ಸಾಧಿಸಿತು.
ಅಚ್ಚಪಂಡ ಮತ್ತು ಕುಟ್ಟಂಡ(ಮಾದಾಪುರ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಟ್ಟಂಡ ಗೆಲುವು ಸಾಧಿಸಿತು. ಚೌರೀರ(ಹೊದವಾಡ) ಮತ್ತು ಮೇವಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಚೌರೀರ ಜಯ ಸಾಧಿಸಿತು. ಚೇಂದಿರ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ಗೆಲುವು ದಾಖಲಿಸಿತು. ನಾಪಂಡ ಮತ್ತು ನಾಟೋಳಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿಸಿತು. ಕೇಚೆಟ್ಟಿರ ಮತ್ತು ಚೋಯಮಾಡಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಗೆಲುವು ದಾಖಲಿಸಿತು. ಚೆಪ್ಪುಡಿರ ಮತ್ತು ಮಾಳೇಟಿರ(ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮಾಳೇಟಿರ ಗೆಲುವು ದಾಖಲಿಸಿತು.
ಪಾಂಡಿರ (ಹೆಬ್ಬೆಟ್ಟಿಗೇರಿ) ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ದಾಖಲಿಸಿತು. ಬಾಚಿನಾಡಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಜಯ ಸಾಧಿಸಿತು. ಶಿವಚಾಳಿಯಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಶೂಟ್‌ಔಟ್‌ನಲ್ಲಿ ೧-೦ ಗೋಲಿನ ಅಂತರದಲ್ಲಿ ಕಲಿಯಂಡ ಗೆಲುವು ದಾಖಲಿಸಿತು.
ಚೆಯ್ಯಂಡ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಚೆಯ್ಯಂಡ ಜಯ ಸಾಧಿಸಿತು. ಕಂಬೀರಂಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಕುಪ್ಪಂಡ(ಕೈಕೇರಿ) ಮತ್ತು ಚೌರೀರ (ಹೊದವಾಡ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಶೂಟ್‌ಔಟ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ನಾಪಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಸಡನ್ ಡೆತ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕಾಂಡಂಡ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಂಡಂಡ ತಂಡ ಜಯ ಸಾಧಿಸಿತು.