Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗರ್ಲ್​ಫ್ರೆಂಡ್​ಗೆ ಪ್ರೇಮ ನಿವೇದನೆ ಮಾಡಿದ ನಿರ್ದೇಶಕ

Tuesday, 18.09.2018, 5:34 PM       No Comments

ವಾಷಿಂಗ್ಟನ್​:  ಅಮೆರಿಕಾದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ಗ್ಲೇನ್​ ವೈಸಸ್​ ಅವರು ತಮ್ಮ ಗರ್ಲ್​ಫ್ರೆಂಡ್​ ಜಾನ್​ ಸ್ವೆನ್ಡ್​ಸೆನ್​ ಅವರಿಗೆ ವಿಶಿಷ್ಟವಾಗಿ, ವಿಶೇಷ ಸಂದರ್ಭದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅವರ ಈ ಪ್ರೇಮ ನಿವೇದನೆಯ ರೀತಿ ಈಗ ಜಗತ್ತಿನೆಲ್ಲೆಡೆ ಭಾರಿ ಸುದ್ದಿಯಾಗಿದೆ.

57 ವರ್ಷ ವಯಸ್ಸಿನ ಗ್ಲೇನ್​ ವೈಸಸ್​​ ಎಮಿ​ 2018 ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತು ಆರಂಭಿಸಿದ ಗ್ಲೇನ್​ ವೈಸಸ್​​ ತಮ್ಮ ಗರ್ಲ್​ಫ್ರಂಡ್​ ಜಾನ್​ ಸ್ವೆನ್ಡ್​ಸೆನ್​ ಅವರನ್ನು ಉದ್ದೇಶಿಸಿ, ” ನೀನೊಂದು ಅದ್ಭುತ. ನಿನ್ನನ್ನು ನನ್ನ ಗರ್ಲ್​ಫ್ರೆಂಡ್​ ಎಂದು ಕರೆಯಲು ನನಗೇಕೋ ಮನಸಾಗುತ್ತಿಲ್ಲ. ಯಾಕೆಂದರೆ ನೀನು ನನ್ನ ಹೆಂಡತಿ,” ಎಂದು ಅವರು ಕಾರ್ಯಕ್ರಮದ ಮಧ್ಯದಲ್ಲೇ ಹೀಗೆ ಪ್ರಪೋಸ್​ ಮಾಡಿದ್ದಾರೆ.

ಇದಿಷ್ಟೇ ಅಲ್ಲ, ಅವರ ತಂದೆಯು ತಾಯಿಗೆ ತೊಡಿಸಿದ್ದ ಉಂಗುರವನ್ನೇ ವೈಸಸ್​ ಅವರು ತಮ್ಮ ಪ್ರೇಯಸಿಗೂ ತೊಡಿಸಿ ಸಂತಸ ಪಟ್ಟರು.

Leave a Reply

Your email address will not be published. Required fields are marked *

Back To Top