56.77 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ

ಧಾರವಾಡ: ಪ್ಲಾಸ್ಟಿಕ್ ನಿಷೇಧವಿದ್ದರೂ ಅನೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್​ಗಳ ಬಳಕೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ಮಾರುಕಟ್ಟೆ ಪ್ರದೇಶದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು.

ಪಾಲಿಕೆ ವಲಯ ಕಚೇರಿ 3ರ ಸಹಾಯಕ ಆಯುಕ್ತ ಜಿ.ಎನ್. ಗುತ್ತಿ ನೇತೃತ್ವದಲ್ಲಿ ಲೈನ್ ಬಜಾರ್, ಸಂಗಮ ವೃತ್ತದಲ್ಲಿನ 15 ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 56.77 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶಪಡಿಸಿಕೊಂಡು 53 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ಲೈನ್ ಬಜಾರದಲ್ಲಿನ ಕಂಚನ್ ಸಿಲ್ಕ್ ಆಂಡ್ ಸಾರೀಸ್, ಇಜಂತಕರ್, ಜಯ ಕರ್ನಾಟಕ ಗಾದಿ ಕಾರ್ಖಾನೆ, ಫ್ಯಾಶನ್ ಪಾಯಿಂಟ್, ಸಿಟಿ ಶಾಪಿಂಗ್ ಸೆಂಟರ್, ಫ್ಯಾಶನ್ ಲಿಂಕ್, ಸಂಗಮ ವೃತ್ತ ಬಳಿಯ ನಿರ್ಮಲಾ ಎಂಪೋರಿಯಂ, ಭಾರತಿ ಜನರಲ್ ಸ್ಟೋರ್ಸ್, ಎನ್.ವಿ. ಪಂಡಿತ್ ಜನರಲ್ ಸ್ಟೋರ್ಸ್, ಸ್ಪಿರಿಟ್ ಡ್ರಾಪ್ ವೈನ್ ಶಾಪ್, ಸೇರಿದಂತೆ ಒಟ್ಟು 15 ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ವಲಯ ಕಚೇರಿ 3ರ ಪರಿಸರ ಇಂಜಿನಿಯರ್ ನವೀನಕುಮಾರ, ಎಇ ಸಲ್ಮಾನ್​ಖಾನ್, ಹಿರಿಯ ಆರೋಗ್ಯ ನಿರೀಕ್ಷಕ ಮಹಾಂತೇಶ ಮ್ಯಾಗೇರಿ, ಕಿರಿಯ ಆರೋಗ್ಯ ನಿರೀಕ್ಷಕರು, ಸಿಬ್ಬಂದಿ ಇದ್ದರು.