ಗಣಿ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ಮುಂಗಾರುಪೂರ್ವ ಮಳೆ

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಮಳೆ, ಬೀಸಿದ ಗಾಳಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಕೂಡ್ಲಿಗಿ ತಾಲೂಕಿನ ಸುಲ್ತಾನಪುರ (ಪಿಚಾರಹಟ್ಟಿ) ಗ್ರಾಮದಲ್ಲಿ ಸಿಡಿಲು ಬಡಿದು ಇಮಾಮ್ ಸಾಬ್ ಅವರ ಎರಡು ಎತ್ತುಗಳು ಮೃತಪಟ್ಟಿವೆ. ಕಾನ ಹೊಸಹಳ್ಳಿ ಸುತ್ತಮುತ್ತ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿರುವುದು ತುಸು ನೆಮ್ಮದಿ ತಂದಿದೆ.

ಸಂಡೂರು ತಾಲೂಕಿನಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಅಗ್ರಹಾರ ಗ್ರಾಮದಲ್ಲಿ ಮನೆಗಳ ಶೀಟ್ ಗಳು ಹಾರಿ ಹೋಗಿವೆ. ಸಂಡೂರು ಹೋಬಳಿಯಲ್ಲಿ 15.4, ಚೋರನೂರು 8 ಮತ್ತು ತೋರಣಗಲ್ ಹೋಬಳಿಯಲ್ಲಿ
5.4 ಮಿ.ಮೀ. ಮಳೆಯಾಗಿದೆ.

ಕಂಪ್ಲಿ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಗಾಳಿ ಸಹಿತ ಸುರಿದ ಮಳೆಯಿಂದ ಬೃಹತ್ ಮರ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಗ್ರಾಮದ ಆಂಜನೇಯ ದೇವಸ್ಥಾನದ ಬಳಿಯಿರುವ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

Leave a Reply

Your email address will not be published. Required fields are marked *