ಬೆಳಗಾವಿ: 52 ಕೆಜಿ ಪ್ಲಾಸ್ಟಿಕ್ ವಶ

ಬೆಳಗಾವಿ: ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ನಿಯಂತ್ರಿಸುವ ದಿಶೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ನಡೆಸಿ ಒಟ್ಟು 52 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 16,200 ರೂ. ದಂಡ ವಸೂಲಿ ಮಾಡಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಆರೋಗ್ಯ ಅಧಿಕಾರಿ ಡಾ.ಶಶಿಧರ ನಾಡಗೌಡ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಪರಿಸರ ಇಂಜಿನಿಯರ್ ಉದಯಕುಮಾರ ಬಿ.ಟಿ. ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ನಗರದ ಬ್ರಾೃಂಡೆಡ್ ವ್ಯಾಪಾರಿ ಮಳಿಗೆಗಳನ್ನು ಆಯ್ದುಕೊಂಡು ದಾಳಿ ನಡೆಸಲಾಗಿದ್ದು, ಖಡೇಬಜಾರ್‌ನ ಅಂಬಿಕಾ ಕ್ಲಾಥ್ ಸೆಂಟರ್‌ಗೆ 5 ಸಾವಿರ ರೂ., ಗೌತಮ ಫ್ಯಾಬ್ರಿಕ್ಸ್‌ಗೆ 2 ಸಾವಿರ ರೂ., ಶ್ರೀರಾಮ ಕಲೆಕ್ಷನ್ಸ್‌ಗೆ 5 ಸಾವಿರ ರೂ., ಶಹಾಪುರದ ಸಾರಿ ಮಂದಿರಕ್ಕೆ 4 ಸಾವಿರ ರೂ., ರೇನ್ ಬೋ ಕಲೆಕ್ಷನ್ಸ್‌ಗೆ 200 ರೂ. ದಂಡ ವಿಧಿಸಲಾಗಿದೆ.

ದಾಳಿ ನಡೆಸಿದ ಪಾಲಿಕೆ ತಂಡದಲ್ಲಿ ಪರಿಸರ ಇಂಜಿನಿಯರ್‌ಗಳಾದ ಮಹಾದೇವಿ, ಆದಿಲ್‌ಖಾನ್ ಪಠಾಣ, ಚೀಫ್ ಸ್ಯಾನಿಟರಿ ಆಫೀಸರ್ ಬಾಬು ಮಾಲಣ್ಣವರ, ಎಚ್.ಡಿ.ಕಾಂಬಳೆ, ಸಾಧಿಕ್ ಧಾರವಾಡ, ರವಿ ಮಾಸ್ತಿಹೊಳ್ಳಮಠ ಮತ್ತಿತರರು ಇದ್ದರು.