ಮಸ್ಕಿ: ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ.7ರಂದು ಬೆಂಗಳೂರಿನ ಡಾ.ಅಂಬೇಡ್ಕರ್ ಭವನದಲ್ಲಿ ಸಂಭ್ರಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಕಾಸಿಮಪ್ಪ ಡಿ.ಮುರಾರಿ ತಿಳಿಸಿದರು.
ಇದನ್ನೂ ಓದಿ:17ರಿಂದ ಶ್ರೀನಿಧಿ ಟೆಕ್ಸ್‌ಟೈಲ್ಸ್ ಸಂಭ್ರಮೋತ್ಸವ
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ದಲಿತ ಸಮುದಾಯ ಒಗ್ಗೂಡಿಸಿ ಅವರಿಗೆ ಧ್ವನಿಕೊಟ್ಟವರು ಬಿ.ಕೃಷ್ಣಪ್ಪ. ಅವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಹೆಮ್ಮರವಾಗಿ ಬೆಳೆದಿದೆ. ಕೃಷ್ಣಪ್ಪ ಅವರ ಜನ್ಮದಿನ ಅಂಗವಾಗಿ ಮತ್ತು ಸಂಘಟನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಮಾಡಲಾಗುವುದು. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ಸರ್ಕಾರ,
ಆಂಧ್ರ ಮತ್ತು ತಮಿಳುನಾಡು ಸರ್ಕಾರ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು ಹಾಗೂ ಇನ್ನಿತರ 11ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ತಾಲೂಕು ಸಮಿತಿ ರಮೇಶ್ ಬೆಳ್ಳಿಗನೂರು, ರಡ್ದೆಪ್ಪ, ಮೋಹನ್ ಎಂ.ಮುರಾರಿ, ದ್ಯಾಮಣ್ಣ ಸಂತೆಕಲ್ಲೂರು ಇದ್ದರು.