ಒಂದು ಸ್ಮೈಲ್​ಗೆ ಬಲೆಗೆ ಬಿದ್ದ 50 ಸೈನಿಕರು?

ಜೈಪುರ: ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ 37 ಎಸೆತಗಳಲ್ಲಿ ಶತಕ ಬಾರಿಸಿದ್ದು 22 ವರ್ಷ ಕೆಳಗೆ ವಿಶ್ವದಾಖಲೆ ಎನಿಸಿತ್ತು. ಇದೀಗ ಅದೇ ದೇಶದ ಮೋಹಕ ಬೇಹುಗಾರ್ತಿಯೊಬ್ಬಳು ಒಂದೇ ಒಂದು ಸ್ಮೈಲ್ ಮೂಲಕ ಹನಿಟ್ರ್ಯಾಪ್​ನಲ್ಲಿ ಅರ್ಧ ಶತಕ ಬಾರಿಸಿರುವುದು ದಾಖಲೆ!

ಅನಿಕಾ ಛೋಪ್ರಾ ಎಂಬ ನಕಲಿ ಹೆಸರಲ್ಲಿ ಸೇನಾ ಆಸ್ಪತ್ರೆಯ ನರ್ಸ್ ಎಂದು ಹೇಳಿಕೊಂಡು ಫೇಸ್​ಬುಕ್​ನಲ್ಲಿ ಖಾತೆ ತೆರೆದಿರುವ ಈಕೆ ಭಾರತದ 50 ಸೈನಿಕರನ್ನು ಮೋಹದ ಬಲೆಗೆ ಬೀಳಿಸಿದ್ದಾಳೆಂದು ತಿಳಿದು ಬಂದಿದೆ. ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಬಂಧಿತನಾಗಿರುವ ಯೋಧ ಸೋಮ್ೕರ್ ಸಿಂಗ್ ಈಕೆಯ ಹೊಸ ಬೇಟೆ. ಪಾಕಿಸ್ತಾನ ಸೇನೆಗೆ ಭಾರತ ಸೇನೆಯ ತರಬೇತಿ ಮಾಹಿತಿ, ಶಸ್ತ್ರಾಸ್ತ್ರಗಳ ಚಿತ್ರ, ನಕ್ಷೆ ಸಹಿತ ಪ್ರಮುಖ ಮಾಹಿತಿಗಳನ್ನು ರವಾನಿಸುತ್ತಿರುವ ಆರೋಪದ ಮೇಲೆ ಬಂಧಿತನಾಗಿರುವ ಈತನ ವಿಚಾರಣೆ ವೇಳೆ ಅನಿಕಾ ಛೋಪ್ರಾಳ ಹನಿಟ್ರಾ್ಯಪ್ ರಹಸ್ಯ ಬಯಲಾಗಿದೆ. -ಏಜೆನ್ಸೀಸ್

ಯಾರು ಈಕೆ?

ಪಾಕಿಸ್ತಾನದ ಕರಾಚಿ ನಿವಾಸಿ ಎನ್ನಲಾದ ಈಕೆ ತನ್ನ ಹೆಸರನ್ನು ಮರೆಮಾಚಿ ಫೇಸ್​ಬುಕ್​ನಲ್ಲಿ ಖಾತೆ ತೆರೆದಿದ್ದಳು. 2016ರಲ್ಲಿ ಸೋಮ್​ವೀರ್​ಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ಈಕೆ ಆತನನ್ನು ಪ್ರೇಮದ ಪಾಶಕ್ಕೆ ಸಿಲುಕಿಸಿದ್ದಳು. ಪತ್ನಿಗೆ ವಿಚ್ಛೇದನ ನೀಡಿ ಈಕೆಯನ್ನು ಮದುವೆ ಆಗಲು ಸೋಮ್ೕರ್ ಸಿದ್ಧತೆ ನಡೆಸಿದ್ದ ಎಂದು ವಿಚಾರಣೆ ವೇಳೆ ಬಯಲಾಗಿದೆ. ಜತೆಗೆ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ್ದಕ್ಕೆ ಪ್ರತಿ ತಿಂಗಳು ಹಣ ಪಡೆಯುತ್ತಿದ್ದ ಎಂಬುದಕ್ಕೆ ಪುರಾವೆ ಸಿಕ್ಕಿರುವುದಾಗಿ ತಿಳಿದು ಬಂದಿದೆ.

ಕೋರ್ಟ್​ಗೆ ಹಾಜರು

ಸೋಮ್ೕರ್​ಸಿಂಗ್​ನನ್ನು ರಾಜಸ್ಥಾನ ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಸೇನಾ ಪಡೆ ಎಲ್ಲ ಸಹಕಾರ ನೀಡಲಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ಸಂಬಿತ್ ಘೋಷ್ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಬ್ರಹ್ಮೋಸ್ ಏರೋಸ್ಪೇಸ್​ನ ಇಂಜಿನಿಯರ್ ನಿಶಾಂತ್ ಅಗರ್​ವಾಲ್ ಹನಿಟ್ರಾ್ಯಪ್​ಗೆ ಸಿಲುಕಿ ಶತ್ರು ದೇಶಕ್ಕೆ ತಾಂತ್ರಿಕ ಮಾಹಿತಿ ರವಾನೆ ಮಾಡುತ್ತಿದ್ದ ಆಪಾದನೆ ಮೇಲೆ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು.

ಒಂದು ಖಾತೆ 10 ಲವ್!

ಭಾರತದ ಹತ್ತಾರು ಯೋಧರ ಸ್ನೇಹ ಸಂಪಾದಿಸಿದ್ದ ಅನಿಕಾ ಬೇರೆ ಬೇರೆ ಸಮಯದಲ್ಲಿ ಫೇಸ್​ಬುಕ್ ಮೂಲಕವೇ ಎಲ್ಲರ ಜತೆ ಚಾಟ್ ನಡೆಸುತ್ತಿದ್ದಳೆಂಬುದು ಬೆಳಕಿಗೆ ಬಂದಿದೆ.

ಸೋಮ್​ವೀರ್​ ಸಿಕ್ಕಿಬಿದ್ದಿದ್ದು ಹೇಗೆ?

ಈತನ ದೂರವಾಣಿ ಕರೆಗಳ ಮೇಲೆ ಕಳೆದ ಐದಾರು ತಿಂಗಳಿಂದ ನಿಗಾ ಇಟ್ಟಿದ್ದ ಸೇನಾ ಗುಪ್ತದಳ ಅಂತಿಮವಾಗಿ ಬಂಧಿಸಿದೆ. ಸೋಮ್ೕರ್​ನಂತೆ ಸೇನಾಪಡೆಯ ಹಲವು ಮಂದಿ ಅನಿಕಾಳ ಹನಿಟ್ರಾ್ಯಪ್​ಗೆ ಸಿಕ್ಕಿಬಿದ್ದಿರುವುದು ಬಯಲಾಗಿದೆ.