ಕೋವಿಡ್​ 19 ಚಿಕಿತ್ಸೆಗೆ ಅಗತ್ಯವಾದ ಪಿಪಿಇಯ ಶೇ.50 ಈ ನಗರದಲ್ಲೇ ತಯಾರಾಗುತ್ತದೆ… ಕೇಂದ್ರ ಸರ್ಕಾರದ ಮಾಹಿತಿ

blank

ಬೆಂಗಳೂರು: ಕೋವಿಡ್​ 19 ಚಿಕಿತ್ಸೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್​ಗೆ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಅಥವಾ ಕವರ್​ಆಲ್​ಗಳು ತುಂಬಾ ಅಗತ್ಯವಾಗಿವೆ. ಇವುಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ಪ್ರತಿದಿನ 1 ಲಕ್ಷ ಪಿಪಿಇಗಳನ್ನು ತಯಾರಿಸಲಾಗುತ್ತಿದೆ. ಇದರ ಶೇ.50 ಭಾಗ ಬೆಂಗಳೂರಿನಲ್ಲೇ ಸಿದ್ಧವಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕರೊನಾ ವಾರಿಯರ್ಸ್​ ಸುರಕ್ಷತೆ ದೃಷ್ಟಿಯಿಂದ ವಿಶೇಷವಾದ ಪಿಪಿಇಗಳು ತುಂಬಾ ಅಗತ್ಯವಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅವುಗಳ ತಯಾರಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಿರುವ ಮಾನದಂಡಗಳನ್ನು ಆಧರಿಸಿ ತನ್ನದೇ ಆದ ತಾಂತ್ರಿಕ ಮಾನದಂಡಗಳನ್ನು ರೂಪಿಸಿದೆ. ಅಲ್ಲದೆ, ಇವುಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ಖರೀದಿಸಲು ಏಕಗವಾಕ್ಷಿ ಪದ್ಧತಿಯಡಿ ಎಚ್​ಎಲ್​ಎಲ್​ ಲೈಫ್​ಕೇರ್​ ಎಂಬ ಸಂಸ್ಥೆಗೆ ಜವಾಬ್ದಾರಿ ನೀಡಿದೆ.

ಬೆಂಗಳೂರು ಅಲ್ಲದೆ, ತಮಿಳುನಾಡಿನ ತಿರುಪ್ಪುರ, ಚೆನ್ನೈ ಮತ್ತು ಕೋಯಮತ್ತೂರು, ಗುಜರಾತ್​ನ ಅಹಮದಾಬಾದ್​ ಮತ್ತು ವಡೋದರ, ಪಂಜಾಬ್​ನ ಪಗ್ವಾರಾ ಮತ್ತು ಲೂಧಿಯಾನ, ಮಹಾರಾಷ್ಟ್ರದ ಕುಸುಮನಗರ ಮತ್ತು ಭಿವಾಂಡಿ, ರಾಜಸ್ಥಾನದ ಡುಂಗಾರಪುರ, ಕೋಲ್ಕತ, ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ ಸೇರಿ ವಿವಿಧೆಡೆಗಳಲ್ಲಿ ಪಿಪಿಗಳನ್ನು ತಯಾರಿಸಲಾಗುತ್ತಿದೆ.

ಈ ಎಲ್ಲ ಕೇಂದ್ರಗಳಲ್ಲಿ ಒಟ್ಟು 1 ದಶಲಕ್ಷ ಪಿಪಿಗಳನ್ನು ತಯಾರಿಸಲಾಗಿದೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

ಪಾಸ್​ ತೋರಿಸಿದರೂ ಪೊಲೀಸರೂ ಒಪ್ಪಲಿಲ್ಲ, ಬೇಕೆಂದೇ ನನಗೆ ಬಸ್ಕಿ ಹೊಡೆಸಿ, ಅಪಹಾಸ್ಯ ಮಾಡಿದರು…

Share This Article

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…