More

    ಕಟ್ಟು ಕೊತ್ತಂಬರಿ ಸೊಪ್ಪಿಗೆ ಕೇವಲ 50 ಪೈಸೆ!

    ಬೆಳಗಾವಿ: ಬೆಳಗಾವಿ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ದರ ಏಕಾಏಕಿ ಕುಸಿತಗೊಂಡಿದ್ದು, ವಾರದ ಹಿಂದಷ್ಟೇ ಕಟ್ಟಿಗೆ 50 ರೂ. ಇದ್ದ ಕೊತ್ತಂಬರಿ ಈಗ ಕೇವಲ 50 ಪೈಸೆಗೆ ಮಾರಾಟವಾಗುತ್ತಿದೆ..! ಕಷ್ಟಪಟ್ಟು ಬೆಳೆದ ಕೊತ್ತಂಬರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೈತರಿಗೆ ಕೃಷಿ ಕಾಯಕದಲ್ಲಿ ಜಿಗುಪ್ಸೆ ಉಂಟಾಗುವಂತಾಗಿದೆ.

    ದೂರದ ಊರುಗಳಿಂದ ಸೊಪ್ಪು, ತರಕಾರಿಯನ್ನು ನಗರ ಹಾಗೂ ಪಟ್ಟಣಕ್ಕೆ ತರುತ್ತಿರುವ ರೈತರು ಇಲ್ಲಿಯ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೇರಿದಂತೆ ಇನ್ನಿತರ ಸೊಪ್ಪುಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಲಾಭದ ಮಾತು ಹಾಗಿರಲಿ, ಬೆಳೆದ ಖರ್ಚು ಸಹ ಸಿಗದ ರೀತಿಯಲ್ಲಿ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ದರ ನಿಗದಿ ಮಾಡುತ್ತಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದ ಬೆಲೆಗೆ ಸೊಪ್ಪು ಮಾರಾಟ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts