More

  ಕಾಳಗಿಯಲ್ಲಿ 50 ಮೀ ಉದ್ದದ ಧ್ವಜದ ಮೆರವಣಿಗೆ

  ಕಾಳಗಿ: ಕನ್ನಡ ರಾಜ್ಯೋತ್ಸವ ನಿಮಿತ್ತ ಪಟ್ಟಣದಲ್ಲಿ ತಾಲೂಕು ಆಡಳಿತ, ಕನ್ನಡಪರ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಿಂದ 50 ಮೀ ಉದ್ದದ ಕನ್ನಡ ಧ್ವಜದ ಭವ್ಯ ಮೆರವಣಿಗೆ ಬುಧವಾರ ಜರುಗಿತು.

  ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಘಮಾವತಿ ರಾಠೋಡ್ ಅವರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟç ಧ್ವಜಾರೋಹಣ ನೇರವೇರಿಸಿದರು. ತಹಸಿಲ್ ಕಚೇರಿಯಿಂದ ಪ್ರಾರಂಭವಾದ ಧ್ವಜದ ಮೆರವಣಿಗೆ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಮುಖ್ಯ ಬಜಾರ್ ರಸ್ತೆ ಮಾರ್ಗವಾಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳ ನೃತ್ಯ ಗಮನಸೆಳೆಯಿತು.

  ಕನ್ನಡಪರ ಘೋಷಣೆಗಳು ಮೊಳಗಿದವು. ಪಪಂ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ, ಉಪ ತಹಸೀಲ್ದಾರ್ ಮಾಣಿಕ ಘತ್ತರಗಿ, ಪ್ರಮುಖರಾದ ಸಿದ್ರಾಮ ದಂಡಗುಲಕರ್, ಶರಣಗೌಡ ಪೊಲೀಸ್ ಪಾಟೀಲ್, ಸಂತೋಷ ಕುಡ್ಡಳ್ಳಿ, ದತ್ತು ಗುತ್ತೇದಾರ್, ಶಿವಕುಮಾರ ಶಾಸ್ತಿç, ಮಹಾಂತೇಶ ಪಂಚಾಳ, ವಿಶ್ವನಾಥ ಬಾಕಳೆ, ಸಂತೋಷ ಪತಂಗೆ, ಪರಮೇಶ್ವರ ಕಟ್ಟಿಮನಿ, ಅನೀಲಕುಮಾರ ಗುತ್ತೇದಾರ್, ಬಾಬು ನಾಟೀಕಾರ, ಇಬ್ರಾಹಿಂ ಶಾ, ಬಾಬು ಹೀರಾಪುರ, ದೇವಜಿ ಜಾಧವ್, ಶಿವಶರಣಪ್ಪ ಗುತ್ತೇದಾರ್, ಸತೀಶಚಂದ್ರ ಸುಲೇಪೇಟ, ಅಂಬಾದಾಸ ಮದನೆ, ಮಹೇಶ ಬಡಿಗೇರ, ಮಂಜುನಾಥ ಮಹಾರುದ್ರ, ಸಂತೋಷ ಮಾನವಿಕರ್, ಸಿದ್ದಲಿಂಗ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts