ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ಗುರುಗ್ರಾಮ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಬಾಲಕಿಯ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ರಾತ್ರಿ ಬಾಲಕಿ ತಾಯಿಯೊಂದಿಗೆ ಮಲಗಿದ್ದಳು. ತಾಯಿ ಮಧ್ಯದಲ್ಲಿ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಂದ ಮಗುವನ್ನು ಆತನ ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಶೌಚಾಲಯದಿಂದ ತಾಯಿ ವಾಪಸು ಬಂದಾಗ ಮಗಳು ಕಾಣೆಯಾಗಿರುವುದು ತಿಳಿದು ಎಲ್ಲರಿಗೂ ವಿಷಯ ತಿಳಿಸಿದ್ದಾರೆ ಎಂದು ಮಹಿಳಾ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಹುಡುಕಾಟ ನಡೆಸಿದಾಗ ಪಕ್ಕದಲ್ಲಿದ್ದ ಆರೋಪಿಯ ಕೊಠಡಿಯಲ್ಲಿ ಪಜ್ಞಹೀನ ಸ್ಥಿತಿಯಲ್ಲಿ ಬಾಲಕಿ ಸಿಕ್ಕಿದ್ದಾಳೆ. ತಕ್ಷಣ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಗಿದೆ. ಸದ್ಯ ಸಂತ್ರಸ್ತೆ ಸ್ಥಿತಿ ಗಂಭೀರವಾಗಿದ್ದು ಗುರುಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. (ಏಜೆನ್ಸೀಸ್​)