ನರಗುಂದ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೆಎಫ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜೀನಪ್ಪ ಚೌಗಲಾ ಅವರು 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ನರಗುಂದದ ದಂಡಾಪೂರ ಬಡಾವಣೆ, ಶಿರೋಳ, ರೋಣ, ಮೆಣಸಗಿ ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನರಗುಂದ ತಾಲೂಕಿನ ಸಂಕದಾಳ ಗ್ರಾಮದ ಶಬ್ಬೀರಹುಸೇನ ಯಮನೂರಸಾಬ ನದಾಫ್ ಎಂಬಾತನನ್ನು 2018ರ ಡಿಸೆಂಬರ್ 10ರಂದು ಬಂಧಿಸಿದ್ದ ಪೊಲೀಸರು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಸುಧೀರ್ಘ ವಿಚಾರಣೆ ನಂತರ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಗತ್‌ನಾಯಕ ಕಣವಿ ಅವರು ವಾದ ಮಂಡಿಸಿದ್ದರು.