ವರುಣನ ಅರ್ಭಟಕ್ಕೆ ಕಲಬುರಗಿಯಲ್ಲಿ ಸಿಡಿಲಿಗೆ ಐವರು ಯುವಕರು ಬಲಿ, 15 ಮೇಕೆಗಳು ಬಲಿ

ಕಲಬುರಗಿ: ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಸಿಡಿಲಿಗೆ ಐವರು ಹಾಗೂ 15 ಮೇಕೆಗಳು ಮೃತಪಟ್ಟಿವೆ.

ಜಿಲ್ಲೆಯ ಚಿತ್ತಾಪುರದ ಮಾಡಬೂಳ ತಾಂಡದಲ್ಲಿ ಸುರಿದ ಭಾರಿ ಮಳೆಯ ಸಿಡಿಲಿನಿಂದ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ. ಗೇಮು ರಾಥೋಡ್​​​​(32), ಸುರೇಶ್​​​ ಪವಾರ್​(30), ಯುವರಾಜ್​​​​​ (24) ಮೃತರು ಹಾಗೂ ಸೀನಾ ಬಾಯಿ(35) ಗಾಯಗೊಂಡವರು.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಯಾಳು ಸೀನಾಬಾಯಿ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಾಡಬೂಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಮತ್ತೊಂದು ಕಡೆ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಜಿಲ್ಲೆಯ ಅಳಂದ ತಾಲೂಕಿನ ಅಬ್ದುಲ್​​ ಗನಿ (12) ಹಾಗೂ ಸೂರ್ಯಕಾಂತ್(25) ಮೃತಪಟ್ಟರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ. ಇನ್ನೂ ಚಿಂಚೋಳಿಯ ಕುಡ್ಹಳ್ಳಿ ಗ್ರಾಮದ ಶರಣಪ್ಪ ಕಟ್ಟಿಮನಿಯವರ 15 ಮೇಕೆಗಳು ಹೊಲದಲ್ಲಿ ಮೇಯಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿವೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *