ಮಕ್ಕಳ ಕಳ್ಳರೆಂದು ಐವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು

ಮುಂಬೈ: ಮಕ್ಕಳ ಅಪರಹರಣಕಾರರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಐವರನ್ನು ಹೊಡೆದು ಸಾಯಿಸಿರುವ ಘಟನೆ ಮಹಾರಾಷ್ಟ್ರದ ಧುಲೆನಲ್ಲಿ ನಡೆದಿದೆ.

ಬುಡಕಟ್ಟು ರೈನ್‌ಪಾದಾ ಹ್ಯಾಮ್ಲೆಟ್‌ ಎಂಬ ಹಳ್ಳಿ ಬಳಿ ರಾಜ್ಯ ಸಾರಿಗೆ ಬಸ್‌ನಿಂದ ಇತರರೊಂದಿಗೆ ಐವರು ಕೆಳಗಿಳಿದಿದ್ದಾರೆ. ಐವರಲ್ಲಿ ಒಬ್ಬಾತ ಅಲ್ಲಿದ್ದ ಮಕ್ಕಳನ್ನು ಮಾತನಾಡಿಸಲು ಮುಂದಾಗಿದ್ದಾನೆ. ಈ ವೇಳೆ ವಾರದ ಸಂತೆಗೆಂದು ಸೇರಿದ್ದ ಜನ ಮಕ್ಕಳ ಕಳ್ಳರೆಂದು ಹಿಡಿದು ಬಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ಹಲ್ಲೆ ನಡೆಸಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಮಕ್ಕಳನ್ನು ಅಪಹರಿಸುವ ಗುಂಪೊಂದು ಆ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕುರಿತು ಗಾಳಿ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಕೊಂದಿದ್ದಾರೆ.

ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. (ಏಜೆನ್ಸೀಸ್)