More

  ಕೇಂದ್ರ ಬಜೆಟ್​ ತಯಾರಿಯಲ್ಲಿ ವಿತ್ತ ಸಚಿವೆಯೊಂದಿಗೆ ಕೈಜೋಡಿಸಿದ ಪ್ರಮುಖ ಅಧಿಕಾರಿಗಳು ಇವರು…

  ನವದೆಹಲಿ: ಮುಂಬರುವ ಕೇಂದ್ರ ಸರ್ಕಾರದ ಬಜೆಟ್​ ತಯಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಬಳಗ ಸಾಕಷ್ಟು ಶ್ರಮವಹಿಸುತ್ತಿದೆ.

  ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಕಷ್ಟು ಆರ್ಥಿಕ ತಜ್ಞರು, ಉದ್ಯಮಿಗಳು ಮತ್ತು ರೈತ ಸಂಘಟನೆಗಳೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ವೇಗ ನೀಡಲು ಸಲಹೆ ಸೂಚನೆಗಳನ್ನು ಮೋದಿ ಬಳಗ ಪಡೆಯುತ್ತಿದೆ.

  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ತಯಾರಿ ಮಾಡಿ ಫೆ.1ರಂದು ದೇಶದ ಜನತೆಯ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಸರ್ಕಾರದ ಕಾರ್ಯಸೂಚಿಯಾಗಿರುವ ಬಜೆಟ್​ ತಯಾರಿಸಲು ಸರ್ಕಾರದ ಜತೆಗೆ ತೆರಮೆರೆಯಲ್ಲಿ ಕೆಲಸ ಮಾಡಿರುವ ಐವರು ಪ್ರಮುಖ ವ್ಯಕ್ತಿಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

  ರಾಜೀವ್​ ಕುಮಾರ್​ (ಹಣಕಾಸು ಕಾರ್ಯದರ್ಶಿ)
  ರಾಜೀವ್​ ಕುಮಾರ್​ ಅವರು ಹಣಕಾಸು ಸಚಿವಾಲದಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ. ಬ್ಯಾಂಕ್​ಗಳ ವಿಲೀನ ಮತ್ತು ಸಾಲಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಹು ದೊಡ್ಡ ಮರು ಬಂಡವಾಳೀಕರದಂತಹ ಬ್ಯಾಂಕಿಂಗ್​ ಸುಧಾರಣಾ ಯೋಜನೆಗಳನ್ನು ನೀಡಿದ್ದಾರೆ. ಹೀಗಾಗಿ ಮಂದ ಬೆಳವಣಿಗೆಯಲ್ಲಿರುವ ಬ್ಯಾಂಕಿಂಗ್​ ವಲಯ ಬಿಕ್ಕಟ್ಟಿನಿಂದ ಹೊರಬರಲು ಸಲಹೆಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಆರ್ಥಿಕತೆಯಲ್ಲಿನ ಬಳಕೆಯ ಅಂಶಕ್ಕೆ ಉತ್ತೇಜನ ನೀಡಲು ಸಾಲದ ಬೆಳವಣಿಗೆಗೆ ಸುಧಾರಣೆ ತರುವ ನಿಟ್ಟಿನಲ್ಲಿ ತಮ್ಮ ಐಡಿಯಾಗಳನ್ನು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

  ಅತನು ಚಕ್ರಬೂರ್ತಿ (ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ)
  ಜುಲೈನಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿದ ಚಕ್ರಬೂರ್ತಿ ಅವರು ಸರ್ಕಾರಿ ಆಸ್ತಿ ಮಾರಾಟ ಪರಿಣಿತರಾಗಿದ್ದಾರೆ. ಭಾರತದ ಮೊದಲ ಸಾಗರೋತ್ತರ ಸವರನ್​ ಬಾಂಡ್ ಮಾರಾಟ ಯೋಜನೆ ರೂಪಿಸಿದ ಮೆಚ್ಚುಗೆ ಇವರು ಪಾತ್ರರಾಗಿದ್ದಾರೆ. ಆರ್ಥಿಕ ಬೆಳವಣಿಗೆ ಶೇ 5ರ ಕೆಳಗೆ ಬಿದ್ದಾಗ, ಚಕ್ರಬೂರ್ತಿ ನೇತೃತ್ವದ ಸಮಿತಿ ಆರ್ಥಿ ಬೆಳವಣಿಗೆ ಚೇತರಿಸಿಕೊಳ್ಳಲು 1 ಟ್ರಿಲಿಯನ್​ ಡಾಲರ್​ ಮೂಲಭೂತ ಸೌಕರ್ಯ ಹೂಡಿಕೆ ಕಾರ್ಯಕ್ರಮ ತಯಾರಿಸಿದರು. ಆರ್ಥಿಕ ಬೆಳವಣಿಗೆ ಮತ್ತು ಬಜೆಟ್​ ಅಂಶಗಳ ಗುರಿಗೆ ಚಕ್ರಬೂರ್ತಿ ಅವರ ಐಡಿಯಾಗಳು ಮುಖ್ಯವಾಗಿವೆ.

  ಟಿ.ವಿ.ಸೋಮನಾಥನ್​ (ಖರ್ಚುವೆಚ್ಚ ಕಾರ್ಯದರ್ಶಿ)
  ಸೋಮನಾಥನ್ ಅವರು ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯಕ್ಕೆ ಸೇರಿದರು. ಸರ್ಕಾರದ ಖರ್ಚು ವೆಚ್ಚಗಳ ಮೇಲೆ ನಿಗಾವಹಿಸುವ ಸೋಮನಾಥನ್​ ಅವರು ಬೇಡಿಕೆಯನ್ನು ಹೆಚ್ಚಿಸುವಂತೆ ಸರ್ಕಾರದ ಖರ್ಚನ್ನು ತರ್ಕಬದ್ಧಗೊಳಿಸುವುದು ಹಾಗೂ ವ್ಯರ್ಥ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಮುಂಚೆ ಪ್ರಧಾನಿ ಕಚೇರಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಧಾನಿ ಮೋದಿ ಬಯಸುವಂತಹ ಬಜೆಟ್​ ರೂಪಿಸುವಲ್ಲಿ ಸೋಮನಾಥ್​ ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೆ ಎಂದು ನಂಬಲಾಗಿದೆ.

  ಅಜಯ್​ ಭೂಷಣ್​ ಪಾಂಡೆ( ಕಂದಾಯ ಕಾರ್ಯದರ್ಶಿ)
  ಸಂಪನ್ಮೂಲಗಳನ್ನು ಹೆಚ್ಚಿಸಲು ಪಾಂಡೆ ಅವರನ್ನು ನೇಮಿಸಲಾಗಿದ್ದು, ಸಾಕಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಎಂದು ಭಾವಿಸಲಾಗಿದೆ. ಆರ್ಥಿಕ ಮಂದಗತಿಯಲ್ಲಿ ಕಂದಾಯ ಸಂಗ್ರಹ ಮಿತಿಯನ್ನು ನೀಡಲಾಗಿರುತ್ತದೆ. ಕಳೆದ ವರ್ಷ 20 ಬಿಲಿಯನ್​ ಡಾಲರ್​ ಮೌಲ್ಯದ ಕಾರ್ಪೋರೇಟ್​ ತೆರಿಗೆ ಕಡಿತಗೊಳಿಸಿರುವುದರಿಂದ ಹೂಡಿಕೆ ಮೇಲೆ ಅದರ ಫಲಿತಾಂಶವನ್ನು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನೇರ ತೆರಿಗೆ ಸಂಹಿತೆಯಲ್ಲಿ ಕೆಲ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದ್ದು, ಈ ಕುರಿತಾಗಿ ಬಜೆಟ್​ನಲ್ಲಿ ಸಹಲೆ ನೀಡಲಿದ್ದಾರೆ.

  ತುಹಿನ್​ ಕಾಂತ ಪಾಂಡೆ (ಹೂಡಿಕೆ ಕಾರ್ಯದರ್ಶಿ)
  ಏರ್​ ಇಂಡಿಯಾ ಮಾರಾಟ ಕಾರ್ಯತಂತ್ರದಲ್ಲಿ ತುಹಿನ್​ ಕಾಂತ ಪಾಂಡೆ ಅವರ ಹೊಣೆಯು ಇದೆ. ಆದಾಯ ಕ್ರೋಢೀಕರಣದಲ್ಲಿ ಇವರ ಪಾತ್ರ ತುಂಬಾ ಮುಖ್ಯವಾಗಿದೆ. 1.05 ಟ್ರಿಲಿಯನ್​ ರೂಪಾಯಿ ಗುರಿ ಪ್ರಸಕ್ತ ವರ್ಷದಲ್ಲಿ ತಪ್ಪಿದ್ದು, ಮುಂದಿನ ವರ್ಷದಲ್ಲಿ ಬಹುದೊಡ್ಡ ಗುರಿಯನ್ನು ತಲುಪಲು ಸಲಹೆಗಳನ್ನು ನೀಡಲಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts