ಪೂಂಛ್​ನಲ್ಲಿ ಉಗ್ರರ ದಾಳಿ, ಐವರು ಸೈನಿಕರು ಹುತಾತ್ಮ

ಶ್ರೀನಗರ: ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮವಾಗಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಛ್​ನಲ್ಲಿ ನಡೆದಿದೆ. ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಡೇರಾ ಕಿ ಗಲಿ ಮತ್ತು ಬುಫ್ಲಿಯಾಜ್‌ ನಡುವೆ ಧಾತ್ಯರ್​ಮೋರ್​ನಲ್ಲಿ ತಡರಾತ್ರಿ 3.45ರ ಸುಮಾರಿಗೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂಂಛ್​ನ ಬುಫ್ಲಿಯಾಜ್ ಬಳಿ ಯೋಧರು ಸೇನಾ ವಾನಗಳಲ್ಲಿ ತೆರಳುತ್ತಿದ್ದ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಭಯೋತ್ಪಾದಕರ ಏಕಾಏಕಿ ದಾಳಿಗೆ ಯೋಧರು ತಕ್ಷಣವೇ ಪ್ರತ್ಯುತ್ತರ ನೀಡಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸುದ್ದಿ … Continue reading ಪೂಂಛ್​ನಲ್ಲಿ ಉಗ್ರರ ದಾಳಿ, ಐವರು ಸೈನಿಕರು ಹುತಾತ್ಮ