ದೇವಸ್ಥಾನಕ್ಕೆಂದು ಹೊರಟವರ ಕಾರಿಗೆ ಅಪ್ಪಳಿಸಿದ ಲಾರಿ; ಒಂದೇ ಕುಟುಂಬದ ಐವರ ದಾರುಣ ಸಾವು

ಆನೇಕಲ್: ಲಾರಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ‌ ಕೃಷ್ಣಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಶ್ರೀನಾಥ್ ರೆಡ್ಡಿ(55), ಚಂದ್ರಮ್ಮ(45),ಭರತ್ ರೆಡ್ಡಿ (24), ಶಾಲಿನಿ (26) ಸಂದೀಪ್​ ರೆಡ್ಡಿ (29) ಮೃತ ದುರ್ದೈವಿಗಳು. ಅಪಘಾತ ನಿನ್ನೆ ಮಧ್ಯಾಹ್ನವೇ ನಡೆದಿದ್ದು ಇಂದು ಬೆಳಕಿಗೆ ಬಂದಿದೆ.

ಇವರು ಆನೇಕಲ್​ನ ಜಿಗಣಿ ಸಮೀಪದ ಹುಲಿಮಂಗಲದ ನಿವಾಸಿಗಳು. ಕಾರಿನಲ್ಲಿ ತಿರುವಲ್ಲೂರು ದೇವಸ್ಥಾನಕ್ಕೆ ತೆರಳುತ್ತಿದ್ದರು. ಇಂದು ಹುಲಿಮಂಗಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೃಷ್ಣಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Reply to “ದೇವಸ್ಥಾನಕ್ಕೆಂದು ಹೊರಟವರ ಕಾರಿಗೆ ಅಪ್ಪಳಿಸಿದ ಲಾರಿ; ಒಂದೇ ಕುಟುಂಬದ ಐವರ ದಾರುಣ ಸಾವು”

  1. ಇವರುಗಳನ್ನು ಯಾವ ದೇವರೂ ಕಾಪಾಡಲಿಲ್ಲವೇಕೆ? ಮೂಢ ನಂಬಿಕೆಗಳಿಂದ ಹೊರಬರದೇ ಮಾನವರು ಉದ್ಧಾರವಾಗುವುದು ಸಾಧ್ಯವೇಯಿಲ್ಲ.

Leave a Reply

Your email address will not be published. Required fields are marked *