More

    ಡಾರ್ಜಿಲಿಂಗ್ ದಂಪತಿಗೆ 5.9 ಕೆಜಿ ಮಗು ಜನನ

    ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ 5.9 ಕೆ.ಜಿ. ತೂಕದ ಗಂಡು ಶಿಶು ಜನಿಸಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ಮಗು ದಪ್ಪ ಇದ್ದದ್ದರಿಂದ ವೈದ್ಯರು ಜ.18ರ ಬೆಳಗ್ಗೆ 7.46ಕ್ಕೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದಾರೆ. ಯಲಹಂಕ ಬಳಿ ವಾಸವಿರುವ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಮೂಲದ ಸರಸ್ವತಿ ಮಂಗೂರ್ ಮತ್ತು ಯೋಗೇಶ್ ಮಂಗೂರ್ ದಂಪತಿಯ ಈ ಶಿಶು ನೋಡಲು ವೈದ್ಯರು, ದಾದಿಯರು ಸೇರಿ ಆಸ್ಪತ್ರೆಯಲ್ಲಿ ಜನರು ಮುಗಿಬಿದ್ದಿದ್ದಾರೆ.

    ಸಾಮಾನ್ಯವಾಗಿ ಆರೋಗ್ಯಕರವಾಗಿ ಜನಿಸುವ ಯಾವುದೇ ಶಿಶು 2.5 ರಿಂದ 3 ಕೆ.ಜಿ. ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ3.5ರಿಂದ 4 ಕೆ.ಜಿ. ತೂಕದ ಶಿಶುಗಳು ಜನಿಸಿರುವುದೂ ಉಂಟು. ಆದರೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ 5.9 ಕೆ.ಜಿ. ತೂಕದ ಶಿಶು ಜನಿಸಿದ್ದು, ಹುಟ್ಟಿದ ಕೂಡಲೇ ತುರ್ತನಿಗಾ ಘಟಕದಲ್ಲಿ ಇರಿಸಲಾಗಿತ್ತು. ಈಗ ತಾಯಿಯೊಂದಿಗೆ ವಾರ್ಡ್​ನಲ್ಲೇ ಇದೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಲ್ಲ. ಮುಂದೆ ಯಾವುದೇ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕೆ ಕೆಲ ಪರೀಕ್ಷೆ ಮಾಡಬೇಕಿದೆ ಎಂದು ವೈದ್ಯಕೀಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದರು.

    ನಮಗೆ 14 ವರ್ಷದ ನಂತರ ಜನಿಸಿರುವ 2ನೇ ಮಗು ಇದು. ಮೊದಲನೆಯದು ಗಂಡು ಮಗು ಜನಿಸಿದಾಗ 3.5 ಕೆ.ಜಿ. ಇತ್ತು ಎಂದು ಯೋಗೇಶ್ ಮಂಗೂರ್ ಹೇಳಿದರು.

    6.8 ಕೆ.ಜಿ. ತೂಕದ ಹೆಣ್ಣು ಮಗು: ಈ ಹಿಂದೆ 2016ರಲ್ಲಿ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ 19 ವರ್ಷದ ಯುವತಿಗೆ 6.8 ಕೆ.ಜಿ. ತೂಕದ ಹೆಣ್ಣು ಮಗು ಜನಿಸಿದ್ದು, ಬಾರಿ ಸುದ್ದಿಯಾಗಿತ್ತು. ಆ ಮಗು ಗಿನ್ನಿಸ್ ಪಟ್ಟಿಯಲ್ಲಿ ಸೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts