Earthquake: ಜಮ್ಮು& ಕಾಶ್ಮೀರದ ಲಡಾಕ್ನ ಕಾರ್ಗಿಲ್ ಪ್ರದೇಶದಲ್ಲಿ 5.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems
ಶುಕ್ರವಾರ ಮುಂಜಾನೆ ಸುಮಾರು 2.50ಕ್ಕೆ ಜಮ್ಮು ಕಾಶ್ಮೀರ ಪ್ರದೇಶದಲ್ಲಿ 15 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಈ ಕುರಿತು ಮೊದಲಿಗೆ ಅಲ್ಲಿನ ಸ್ಥಳೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಭೂಕಂಪನದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.ಅಲ್ಲದೆ, ಭೂ ಕಂಪನದ ಬಗ್ಗೆ ವಿಡಿಯೋಗಳು ವೈರಲ್ ಆಗಿವೆ.
ಲೇಹ್ ಮತ್ತು ಲಡಾಖ್ ಎರಡೂ ದೇಶದ ಭೂಕಂಪ ವಲಯ-IV ರಲ್ಲಿದ್ದು, ಅವು ಭೂಕಂಪಗಳಿಗೆ ಗುರಿಯಾಗುವ ಅಪಾಯದಲ್ಲಿವೆ. ಭೂವಿಜ್ಞಾನಿಕವಾಗಿ ಸಕ್ರಿಯವಾಗಿರುವ ಹಿಮಾಲಯ ಪ್ರದೇಶದಲ್ಲಿನ ಲೇಹ್ ಮತ್ತು ಲಡಾಖ್ ಆಗಾಗ್ಗೆ ಕಂಪನಗಳಿಗೆ ಗುರಿಯಾಗುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.
#Alert : Earthquake hits two different places at same time 02:50 am, kargil, ladakh & padam, HimachalPradesh with magnitude 5.2 & 5.1 respectively…. More details awaited..Stay safe!#earthquake #HimachalPradesh #kargil #ladakh #MUFC #padam#earthquake pic.twitter.com/vwjDAO6fCB
— Syed Hasan Imam Zaidi (@Syed_1109084) March 14, 2025
ಕಳೆದ ತಿಂಗಳು, ಫೆಬ್ರವರಿ 27 ರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು , ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು.(ಏಜೆನ್ಸೀಸ್)
ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದಿಯೇ?; ಹುಷಾರ್, ಇನ್ಮೇಲೆ ಎಚ್ಚರದಿಂದಿರಿ! | Water Bottle
6 ವರ್ಷದ ಮಗುವಿರುವ ತಾಯಿ ಜತೆ ಡೇಟಿಂಗ್ ಫಿಕ್ಸ್! ಅಮೀರ್ ಖಾನ್ ಅಚ್ಚರಿ ಹೇಳಿಕೆ | Dating