16 C
Bengaluru
Wednesday, January 22, 2020

5 ತಾಸಿನಲ್ಲಿ 15 ಸ್ಮಶಾನ ಸ್ವಚ್ಛ

Latest News

ಜಗದಗಲ ಅಂಕಣ: ನಿನ್ನೆಯ ಆತಂಕ, ಇಂದಿನ ಅನಿಶ್ಚಿತತೆ, ನಾಳಿನ ಆಶಾವಾದ

ಕೊಲ್ಲಿಯಲ್ಲಿ ಈ ಕ್ಷಣಕ್ಕೆ ಯುದ್ಧವಾಗುವ ಸಾಧ್ಯತೆ ಇಲ್ಲ. ಇರಾನ್ ಕುರಿತಂತೆ ಕೊಲ್ಲಿ ರಾಷ್ಟ್ರಗಳ ಮತ್ತು ಅಮೆರಿಕದ ಅಭಿಪ್ರಾಯಗಳನ್ನೂ, ಅದರ ವಿರುದ್ಧದ ಯೋಜನೆಗಳನ್ನೂ ರಷ್ಯಾ,...

ಸ್ಟೂಲ್​ನಲ್ಲಿ ಪತ್ತೆಯಾದ 30.6 ಲಕ್ಷ ರೂ.

ಸಾಮಾನ್ಯವಾಗಿ ಕಷ್ಟಕಾಲಕ್ಕೆ ಇರಲಿ ಎಂದು ಹಿಂದಿನ ಕಾಲದ ಹಿರಿಯರು ಸ್ವಲ್ಪ ಹಣವನ್ನು ಬಚ್ಚಿಡುವುದುಂಟು. ಕೆಲವರು ಮಂಚದ ಕೆಳಗೂ ಮುಚ್ಚಿಡುವುದುಂಟು. ಕೆಲವೊಮ್ಮೆ ಅವರಿಗೇ ಅದು...

ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

# ಅವನು ತನ್ನನ್ನು ಅಗಲಿದ ಪತ್ನಿಗಾಗಿ ನಿಶ್ಶಬ್ದದಲ್ಲಿ ದುಃಖಿಸಿದ / ಶೋಕ ವ್ಯಕ್ತಪಡಿಸಿದ. He mourned for his bereaved wife in silence. #...

ನಿತ್ಯ ಭವಿಷ್ಯ: ನಿಮ್ಮದು ಧಾರಾಳತನ ತೋರುವ ಗುಣವಾದರೂ ಆರ್ಥಿಕ ತೊಂದರೆಗೆ ಗುರಿಯಾಗದಿರಿ

ಮೇಷ: ಹೆಚ್ಚಿನ ಯಶಸ್ಸಿಗಾಗಿ ಮತ್ತು ನಂತರದ ಸಮಾಧಾನಕ್ಕಾಗಿ ವಿಶ್ವಾಸದಿಂದಲೇ ಕೆಲಸಗಳನ್ನು ಮಾಡಿ. ಹರ್ಷವಿದೆ. ಶುಭಸಂಖ್ಯೆ: 4 ವೃಷಭ: ನಿಮ್ಮದು ಮೌನವಾದ ಕೆಲಸ, ಆದರೆ ಪರಿಣಾಮ...

ಅಮೃತ ಬಿಂದು

ಶ್ರೀ ಶೈವಾಗಮ ಗುಣಾಗುಣವಿಮರ್ಶಸ್ಯ ತ್ಯಾಗೋ ಯಸ್ತು ಗುರೌ ಚರೇ | ಸಪ್ತತ್ರಿಂಶಂ ಸಮಾಖ್ಯಾತಂ ಶೀಲಂ ಪುಣ್ಯಫಲಪ್ರದಮ್ || ಗುರು ಮತ್ತು ಜಂಗಮನ ವಿಷಯದಲ್ಲಿ ಗುಣದೋಷಗಳ ವಿಮರ್ಶೆಯನ್ನು...

ಹುಬ್ಬಳ್ಳಿ: ಆಗ ತಾನೇ ಸೂರ್ಯ ದಿಗಂತದಿಂದ ಮೇಲೆದ್ದು ಬಂದಿದ್ದ. ಅಷ್ಟೊತ್ತಿಗೆಲ್ಲ 3 ಸಾವಿರಕ್ಕಿಂತ ಹೆಚ್ಚು ಜನರು ವಿವಿಧ ತಂಡಗಳಲ್ಲಿ ಕೈಯಲ್ಲಿ ಗುದ್ದಲಿ, ಸಲಿಕೆ ಹಿಡಿದು ಬೇರೆ ಬೇರೆ ಸ್ಮಶಾನಕ್ಕೆ ನುಗ್ಗಿದ್ದರು. ಒಂದೇ ಸವನೆ ಅಲ್ಲಿದ್ದ ಕಸ ಕಡ್ಡಿ, ಮುಳ್ಳುಕಂಟಿ, ಮೂಳೆ, ತಲೆಬುರುಡೆ ಎಲ್ಲವನ್ನೂ ಬಾಚಿ ತಂದು ಒಂದೆಡೆ ರಾಶಿ ಹಾಕತೊಡಗಿದರು.

ಮೂರು ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ‘ನ ಭೂತೋ’ ಎಂಬ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿದ್ದ ಮಹಾರಾಷ್ಟ್ರದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಶ್ರದ್ಧಾವಂತ ಸ್ವಯಂ ಸೇವಕರು ಅವರು.

ಭಾನುವಾರ ಮತ್ತೊಮ್ಮೆ ಹುಬ್ಬಳ್ಳಿಯಲ್ಲಿ ಅವರು ಜಮಾಯಿಸಿದ್ದರು. ಈ ಬಾರಿ ಆಯ್ಕೆ ಮಾಡಿಕೊಂಡಿದ್ದು ಸ್ಮಶಾನಗಳ ಸ್ವಚ್ಛತೆ ಕಾರ್ಯ!

ಸ್ಮಶಾನವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ರೀತಿಯ ಭಯ. ಅಂತಿಮವಾಗಿ ಎಲ್ಲರೂ ಅಲ್ಲಿಗೇ ತಲುಪುವವರಾದರೂ, ನಾವು ಹುಬ್ಬಳ್ಳಿಗರು ಆ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಂಡಿರಲಿಲ್ಲ.

ಸ್ಮಶಾನ ಎಂದು ಹೆದರುವ ಅಗತ್ಯವಿಲ್ಲ. ನಮ್ಮ ಕಟ್ಟ ಕಡೆಯ ಗಮ್ಯವನ್ನು ನಾವು ಚೆನ್ನಾಗಿಟ್ಟುಕೊಳ್ಳಬೇಕು ಎಂದರೆ ಅದು ಶ್ರಮ ಮತ್ತು ಸೇವೆಯಿಂದಷ್ಟೇ ಸಾಧ್ಯ. ಹಾಗಾಗಿ ಒಮ್ಮನಸ್ಸಿನಿಂದ ದುಡಿಯುವುದೇ ಶ್ರೇಷ್ಠ ಎಂಬುದನ್ನು ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂ ಸೇವಕರು ಕಾರ್ಯತಃ ತೋರಿಸಿಕೊಟ್ಟು, ನಗರದ ಜನರು ಮತ್ತೊಮ್ಮೆ ಮೂಕ ವಿಸ್ಮಿತರಾಗುವಂತೆ ಮಾಡಿದರು. ಪೂರ್ತಿ ಕೆಲಸ ಮುಗಿದ ಮೇಲೆಯೂ ತಾವೇನೋ ಮಾಡಿದ್ದೇವೆ ಎಂಬ ಹಮ್ಮು ಅವರಿಗಿರಲಿಲ್ಲ; ಬದಲಾಗಿ, ಅದು ತಮ್ಮ ಕೆಲಸವಾಗಿತ್ತು, ಮಾಡಿ ಮುಗಿಸಿದ್ದೇವೆ ಎಂಬ ಸಂತೃಪ್ತಿಯ ಭಾವ ಮಾತ್ರವೇ ಅವರ ಮುಖದಲ್ಲಿತ್ತು.

ಶನಿವಾರ ಸಂಜೆಯೇ ನಗರಕ್ಕೆ ಬಂದು ಶ್ರೀ ಸಿದ್ಧಾರೂಢ ಮಠದಲ್ಲಿ ಬೀಡು ಬಿಟ್ಟಿದ್ದ ಮೂರು ಸಾವಿರದಷ್ಟು ಜನರು ತಮ್ಮ ಪಾಡಿಗೆ ತಾವು ಇದ್ದು, ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಬಂದು, ಅಲ್ಲಿಂದ ಕೆಲಸ ಗೊತ್ತು ಮಾಡಿದ್ದ ಸ್ಥಳಕ್ಕೆ ಹೋಗಿ, ಯಾರ ಅಣತಿಗೂ ಕಾಯದೆ, ವಿಶ್ರಾಂತಿಯನ್ನೂ ಪಡೆಯದೇ ತಮ್ಮ ಮನೆ ಕೆಲಸದಂತೆ ಅತ್ಯಂತ ಪ್ರೀತಿಯಿಂದ ದುಡಿದಿದ್ದು ನಿಜಕ್ಕೂ ಮಾದರಿ. ಕಿತ್ತು, ಹೆಕ್ಕಿ ಸಂಗ್ರಹಿಸಿದ ಕಸ-ಕಂಟಿ, ಇತ್ಯಾದಿ ತ್ಯಾಜ್ಯವನ್ನು ತಂದು ಮಹಾನಗರ ಪಾಲಿಕೆ ಟ್ರ್ಯಾಕ್ಟರ್​ಗಳಿಗೆ ಹೇರುವವರೆಗಿನ ಅವರ ದುಡಿಮೆಯನ್ನು ಪ್ರಶಂಸಿಸದವರೇ ಇರಲಿಲ್ಲ.

ಹಳೇ ಹುಬ್ಬಳ್ಳಿಯ ಈಶ್ವರನಗರ, ಹಳೇ ಗಬ್ಬೂರ, ಬಿಡ್ನಾಳ, ನೇಕಾರ ನಗರ, ಜನ್ನತ ನಗರ, ಕೌದಿಮಠ, ಇಂಡಿಪಂಪ್, ಮಂಟೂರ ರಸ್ತೆ ಸೇರಿ ಇತರೆಡೆ ಇರುವ 15 ಹಿಂದು, ಮುಸ್ಲಿಂ, ಕ್ರೖೆಸ್ತ ಧರ್ವಿುಯರ ಸ್ಮಶಾನಗಳು ಅವರ ಶ್ರಮದಾನದಿಂದಾಗಿ ಮಧ್ಯಾಹ್ನ 12ರ ವೇಳೆಗೆ ಸ್ವಚ್ಛ ತಾಣಗಳಾಗಿ ಮಾರ್ಪಟ್ಟಿದ್ದವು.

ಇಂಥ ಸೇವಾ ಕಾರ್ಯ ಮಾಡಲೆಂದೇ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಮತ್ತಿತರ ಭಾಗ; ರಾಜ್ಯದ ಬೆಳಗಾವಿ, ಬೆಂಗಳೂರು, ಮಂಗಳೂರು, ಉಡುಪಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಧಾರವಾಡ, ಹಾವೇರಿ, ಉತ್ತರ ಕನ್ನಡ ಸೇರಿ ಬಹುತೇಕ ಜಿಲ್ಲೆಗಳಿಂದ ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು (ದಾಸರು) ತಮ್ಮದೇ ವಾಹನ ಮಾಡಿಕೊಂಡು ಆಗಮಿಸಿದ್ದರು. ಯಾವುದೇ ಪ್ರಚಾರ ಬಯಸದೇ ಡಾ. ನಾನಾಸಾಹೇಬ ಧರ್ಮಾಧಿಕಾರಿ ಅವರನ್ನು ನೆನೆದು ಸೇವಾ ಕಾರ್ಯ ನೆರವೇರಿಸಿ, ಹುಬ್ಬಳ್ಳಿಗರಿಗೆ ಪರೋಕ್ಷವಾಗಿ ಸ್ವಚ್ಛತೆಯ ಮಾದರಿಯೊಂದನ್ನು ಕೊಟ್ಟು, ತಮ್ಮ ಪಾಡಿಗೆ ತಾವು ಮುಂದಿನ ಕೆಲಸಕ್ಕೆ ಹೊರಟುಬಿಟ್ಟರು.

ಕೊಳವೆಬಾವಿ ಮರುಪೂರಣ

ಬ್ಯಾಡಗಿ ತಾಲೂಕಿನ ಲಿಂಗಸೂರ, ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಬತ್ತಿ ಹೋಗಿರುವ 6 ಕೊಳವೆಬಾವಿಗಳನ್ನು ಮೇ 27ರಂದು ಮರುಪೂರಣ ಮಾಡಲು ಪ್ರತಿಷ್ಠಾನ ನಿರ್ಧರಿಸಿದೆ. ಇವರ ಸೇವಾ ಕಾರ್ಯದಿಂದ, ಈಗಾಗಲೇ ಬತ್ತಿ ಹೋದ ನೂರಾರು ಬೋರ್​ವೆಲ್​ಗಳಲ್ಲಿ ಮರುಪೂರಣದಿಂದಾಗಿ ನೀರು ಜಿನುಗಿದೆ. ನೀರಿನ ಪ್ರಮಾಣ ಹೆಚ್ಚುವ ಬಗ್ಗೆ ರೈತರಿಗೆ ಮಾಹಿತಿ ನೀಡಿ ಗ್ರಾಮೀಣ ಬದುಕಿಗೆ ಆಧಾರವಾಗಲು ಪ್ರತಿಷ್ಠಾನ ಮುಂದಾಗಿದೆ.

ಊಟ, ನೀರು, ಹಣ ಪಡೆಯಲಿಲ್ಲ

ಶನಿವಾರವೇ ಆಗಮಿಸಿದ್ದ 3 ಸಾವಿರ ಸ್ವಯಂ ಸೇವಕರು ಯಾರೊಬ್ಬರಿಂದಲೂ ನೀರು, ಊಟ, ಹಣ ಪಡೆಯಲಿಲ್ಲ. ದೇವರು ಇದ್ದಾನೆ. ಆತನೇ ಎಲ್ಲವನ್ನೂ ನಡೆಸುತ್ತಿದ್ದಾನೆ ಎಂಬ ಭಾವ ಅವರಲ್ಲಿದೆ. ಏನಾದರೂ ಸೇವೆ ಮಾಡಬಹುದೇ ಎಂದು ಯಾರಾದರೂ ಕೇಳಿದರೆ, ನಾವು ನಡೆಸುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ವಿನಯದಿಂದಲೇ ಹೇಳುತ್ತಿದ್ದರು.

ಎರಡನೇ ಸಲ

28.02.2016ರಂದು ಹುಬ್ಬಳ್ಳಿಗೆ ಆಗಮಿಸಿದ್ದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದವರು, ನಗರದ ವಿವಿಧೆಡೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಿದ್ದರು. ಈ ತಂಡ ತನ್ಮಯತೆಯಿಂದ ಮಾಡುತ್ತಿರುವ ಕಾರ್ಯ ನೋಡಿ ಎಲ್ಲರೂ ಚಕಿತಗೊಂಡಿದ್ದರು. ನಗರದ ಜನರು ಯಾರೂ ಭಾಗವಹಿಸಿರಲಿಲ್ಲ. ಈಗ ಮತ್ತೊಮ್ಮೆ ತಂಡ ಆಗಮಿಸಿದೆ. ಈ ತಂಡದಲ್ಲಿ ಉಪನ್ಯಾಸಕರು, ಬ್ಯಾಂಕ್ ನೌಕರರು, ಇಂಜಿನಿಯರ್​ಗಳು, ಉದ್ಯಮಿಗಳು ಇದ್ದಾರೆ ಎಂಬುದು ಅಚ್ಚರಿಯ ವಿಷಯ.

ಆಧ್ಯಾತ್ಮಿಕ ಗುರು

ಡಾ. ನಾನಾಸಾಹೇಬ ಧರ್ವಧಿಕಾರಿಯವರು ಪ್ರಸಿದ್ಧ ಆಧ್ಯಾತ್ಮಿಕ ಗುರು. ಶ್ರೀ ಸಮರ್ಥ ಪ್ರಸಾದಿಕ ಆಧ್ಯಾತ್ಮಿಕ ಸೇವಾ ಸಮಿತಿ ಸ್ಥಾಪಿಸಿದ ಅವರು, ಅದರ ಮೂಲಕ ಶ್ರೀ ಸಮರ್ಥ ರಾಮದಾಸರ ತತ್ತ್ವ್ವ್ಞಾನವನ್ನು ಪ್ರಸಾರ ಮಾಡಿದರು. ಸೇವಾ ಕಾರ್ಯದ ಮಹತ್ವವನ್ನು ಕಾರ್ಯತಃ ತೋರಿಸಿಕೊಟ್ಟ ಅವರಿಗೆ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಸರಳ ಮಾರ್ಗ, ಸೇವಾ ಮನೋಭಾವದ ಮೂಲಕ ಸಮಾಜಕ್ಕೆ ದಾರಿ ತೋರಿದ ಅವರ ಭಕ್ತರ ಸಂಖ್ಯೆ ಲಕ್ಷಾಂತರ. ಅವರು ತೋರಿದ ಮಾರ್ಗದಲ್ಲೇ ಸೇವಾ ಕಾರ್ಯ ಮುಂದುವರಿಸಿದ್ದಾರೆ.

ಇದೊಂದು ಸೇವಾ ಕಾರ್ಯ. ಮಹಾರಾಷ್ಟ್ರ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಸೇವಾ ಕಾರ್ಯಕರ್ತರು ಆಗಮಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಇವರ ಸೇವಾ ಕಾರ್ಯ ಬಹು ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ವರ್ಷದ ಹಿಂದೆ ನಗರಕ್ಕೆ ಬಂದಿದ್ದವರು ಈಗ ಮತ್ತೊಮ್ಮೆ ಬಂದು ಸ್ಮಶಾನಗಳನ್ನು ಸ್ವಚ್ಛಗೊಳಿಸಿದ್ದೇ ಇದಕ್ಕೆ ಸಾಕ್ಷಿ.

| ವಿಜಯ ಲಕ್ಕುಂಡಿ, ಪ್ರತಿಷ್ಠಾನದ ಪ್ರತಿನಿಧಿ

ಎರಡು ವರ್ಷದಿಂದ ಸೇವಾ ಕಾರ್ಯದಲ್ಲಿ ತೊಡಗಿದ್ದೇನೆ. ನನ್ನದು ಮೂಲತಃ ಆಂಧ್ರಪ್ರದೇಶ. ಬಳ್ಳಾರಿಯ ಕಾಲೇಜೊಂದರಲ್ಲಿ ಗಣಿತ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಇಂಥ ಸೇವಾ ಕಾರ್ಯದಲ್ಲಿ ತೊಡಗಿದ ಮೇಲೆ ಮನಸು ಹಾಗೂ ಮನೆಯಲ್ಲಿ ಶಾಂತಿ ನೆಲೆಸಿದೆ.

| ಶ್ರೀನಿವಾಸ, ಬಳ್ಳಾರಿ

ನಾನು ಮೂಲತಃ ಹೋಟೆಲ್ ಉದ್ಯಮಿ. 30 ವರ್ಷದಿಂದ ಈ ಪ್ರತಿಷ್ಠಾನದ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿದ್ದೇನೆ. ಇಲ್ಲಿಯೇ ಬಾಲ ಸಂಸ್ಕಾರ ಪಡೆದಿದ್ದೇನೆ. ಇಲ್ಲಿಗೆ ಬಂದ ಮೇಲೆ ಆರ್ಥಿಕ, ಶಾರೀರಿಕ ಸಮಸ್ಯೆಗಳೇ ದೂರವಾಗಿವೆ. ಇದರಿಂದ ಹೊಸ ಜೀವನ ದರ್ಶನ ನನಗಾಗಿದೆ.

| ಹರೀಶ ಶೆಟಿಗಾರ, ಉಡುಪಿ

2006ರಿಂದ ಪ್ರತಿಷ್ಠಾನ ನಡೆಸುವ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಮ್ಮ ಮನೆಯಲ್ಲಿ ಏನೇ ಸಮಸ್ಯೆ ಇರಲಿ, ನಾನಾಸಾಹೇಬ್ ನೋಡಿಕೊಳ್ಳುತ್ತಾರೆ. ನನ್ನ ಪತ್ನಿ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದರು. ಶೇ. 90ರಷ್ಟು ಅವರು ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ, ನಾವು ಮಾಡಿದ ಸೇವಾ ಕಾರ್ಯ ಪತ್ನಿಯನ್ನು ಬದುಕುಳಿಸಿತು.

| ವಿನಯ ಕಬಾಡಗಿ, ಬಾಗಲಕೋಟೆ

ನನ್ನ ಮನಸ್ಸು ಸದಾ ಚಂಚಲ. ಪ್ರತಿಷ್ಠಾನದಿಂದ ನಡೆಯುವ ಪ್ರವಚನದಲ್ಲಿ ಭಾಗವಹಿಸಿದ್ದೆ. ಅವರು ನಡೆಸುವ ಸಮಾಜ ಸೇವೆಯಲ್ಲಿ ತೊಡಗಿದೆ. ಈಗ ಮನಸ್ಸು ಶಾಂತಿಯಿಂದ ಕೂಡಿದೆ. ಹಾಗಾಗಿ ಮನಸ್ಸು ಸಮಾಜ ಸೇವೆಯಿಂದ ಹೊರಗೆ ಬರುತ್ತಿಲ್ಲ.

| ಗಣಪತಿ ಬಾಬುರಾವ್, ವಿಜಯಪುರ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...