ನವದೆಹಲಿ: ದೇಶದಲ್ಲಿ ಸದ್ಯ ಮೂರನೇ ಹಂತದ ಲಾಕ್ಡೌನ್ ನಡೆಯುತ್ತಿದ್ದು, ಮೇ 17ಕ್ಕೆ ಅದರ ಅವಧಿ ಮುಕ್ತಾಯವಾಗಲಿದೆ. ಆದರೆ ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಕೊವಿಡ್-19 ದೇಶಕ್ಕೆ ಕಾಲಿಟ್ಟಾಗಿನಿಂದ ಇಂದು ಐದನೇ ಬಾರಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನಕ್ಕಾಗಿ ಒಟ್ಟು 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ
ಅದರೊಂದಿಗೆ ಲಾಕ್ಡೌನ್ ಕೂಡ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ. ಕರೊನಾ ವೈರಸ್ ಇನ್ನೂ ಸುದೀರ್ಘ ಸಮಯಗಳವರೆಗೆ ನಮ್ಮೊಂದಿಗೇ ಇರಲಿದೆ. ವೈರಸ್ನೊಂದಿಗೇ ಬದುಕಲು ಕಲಿಯಿರಿ ಎಂದು ಹಲವು ವಿಜ್ಞಾನಿಗಳು, ತಜ್ಞರು ಹೇಳಿದ್ದಾರೆ. ಹಾಗೇ, ಎಲ್ಲ ರಾಜ್ಯಗಳ ಕೊವಿಡ್-19ರ ಪರಿಸ್ಥಿತಿ, ಆರ್ಥಿಕತೆ ಸ್ಥಿತಿಯ ವರದಿಯನ್ನು ಆಯಾ ಮುಖ್ಯಮಂತ್ರಿಗಳಿಂದ ಪಡೆಯಲಾಗಿದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಲಾಕ್ಡೌನ್ ನಾಲ್ಕನೇ ಹಂತವನ್ನು ಕೆಲವು ಹೊಸ ನಿಯಮಗಳೊಂದಿಗೆ ಜಾರಿ ಮಾಡಲಾಗುವುದು. ನಾಲ್ಕನೇ ಹಂತದ ಲಾಕ್ಡೌನ್ ಹೇಗಿರಲಿದೆ, ಅದರ ರೂಪುರೇಷೆಗಳೇನು ಎಂಬುದನ್ನು ಮೇ 18ಕ್ಕೂ ಮೊದಲೇ ದೇಶದ ಜನರಿಗೆ ತಿಳಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಲಾಕ್ಡೌನ್ನಲ್ಲೇ ಸೂಪರ್ಸ್ಟಾರ್ ರಜನಿಕಾಂತ್ ಕಡೆಯಿಂದ ಬಂತು ಸಿಹಿಸುದ್ದಿ!