19 C
Bangalore
Thursday, November 14, 2019

ನ್ಯೂಜಿಲೆಂಡ್​ನಲ್ಲಿ ಉಗ್ರ ದಾಳಿ

Latest News

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಟೊಮ್ಯಾಟೊಗೆ ಬೆಲೆ ಎಷ್ಟಿರಬಹುದು? ಎಂದು ಊಹಿಸಬಲ್ಲಿರಾ?

ಇಸ್ಲಮಾಬಾದ್​: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಪಾಕಿಸ್ತಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ...

ಬೇಷರತ್ ಕ್ಷಮೆಯಾಚಿಸಿದ್ದ ರಾಹುಲ್ ಗಾಂಧಿ: ನ್ಯಾಯಾಂಗ ನಿಂದನೆ ಮೊಕದ್ದಮೆ ಕೈ ಬಿಟ್ಟ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕೀದಾರ್​ ಚೋರ್ ಹೈ ಎಂದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ...

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ದಿ. ಅಂಬರೀಷ್ ಅವರ ಮೊದಲ ಪುಣ್ಯ ತಿಥಿ: ಅರಮನೆ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಖ್ಯಾತ ನಟ ಹಾಗೂ ಮಾಜಿ ಸಚಿವ ದಿ. ಅಂಬರೀಷ್ ಅವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಂಠೀರವ...

ದೇಶದ ಕಾರು ಮಾರುಕಟ್ಟೆಯ ಟಾಪ್ 10 ಕಾರುಗಳ ಪಟ್ಟಿಗೆ ಕೊರಿಯನ್​ ಕಂಪನಿ ಕಾರು!: ಉಳಿದಂತೆ ಮಾರುತಿಯದ್ದೇ ಕಾರುಬಾರು..

ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್​ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು....

ರಫೇಲ್ ವಿವಾದ ಇನ್ನು ಮುಗಿದ ಅಧ್ಯಾಯ: ಮರುಪರಿಶೀಲನಾ ಅರ್ಜಿಗಳು ವಜಾಗೊಳಿಸಿ ಸುಪ್ರೀಂ ಆದೇಶ

ನವದೆಹಲಿ: ವಿವಾದಾತ್ಮಕ ರಫೇಲ್ ಒಪ್ಪಂದವನ್ನು ಮೇಲ್ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ. ರಫೇಲ್ ಒಪ್ಪಂದವನ್ನು ನ್ಯಾಯಾಲಯ ತನಿಖೆಗೆ ಒಳಪಡಿಸುವುದಿಲ್ಲ ಎಂದು...

ವೆಲ್ಲಿಂಗ್ಟನ್: ನ್ಯೂಜಿಲೆಂಡ್​ನ ಕ್ರೖೆಸ್ಟ್​ಚರ್ಚ್​ನ ಎರಡು ಮಸೀದಿಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 49 ಜನ ಮೃತಪಟ್ಟಿದ್ದಾರೆ. ಭಾರತೀಯ ರಾಯಭಾರ ಕಚೇರಿ ಪ್ರಕಾರ ಮೃತರಲ್ಲಿ ಕೆಲವರು ಭಾರತೀಯರಿರುವ ಸಾಧ್ಯತೆಯಿದೆ. ಆದರೆ ಮೃತರಲ್ಲಿ ಬಹುತೇಕರು ಬಾಂಗ್ಲಾದೇಶಿಗಳು ಎನ್ನಲಾಗಿದೆ. ಘಟನೆಯಲ್ಲಿ 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಆಸ್ಟ್ರೇಲಿಯಾ ಮೂಲದ ಬಲಪಂಥೀಯ ಭಯೋತ್ಪಾದಕರು ಶುಕ್ರವಾರ ಮಧ್ಯಾಹ್ನ ಕ್ರೖೆಸ್ಟ್​ಚರ್ಚ್ ನ ಎರಡು ಮಸೀದಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನೇರವಾಗಿ ಮೂವರು ಭಾಗಿಯಾಗಿದ್ದು, ಎಲ್ಲ ಮೂವರನ್ನು ಬಂಧಿಸಲಾಗಿದೆ. ಆಟೋಮೆಟಿಕ್ ಗನ್ ಮೂಲಕ ಶೂಟೌಟ್ ನಡೆಸಿದ್ದು ಖಾತ್ರಿಯಾಗಿದ್ದು, ಪೊಲೀಸರ ಸಮಯೋಚಿತ ಪ್ರತಿದಾಳಿಯಿಂದ ಸುಧಾರಿತ ಬಾಂಬ್ ಸ್ಫೋಟ ಹಾಗೂ ಕಾರು ಬಾಂಬ್​ಗಳ ದಾಳಿ ವಿಫಲವಾಗಿದೆ.

ನ್ಯೂಜಿಲೆಂಡ್​ನ ಅಪರಾಧ ದಾಖಲೆಗಳ ಪ್ರಕಾರ ವಾರ್ಷಿಕ ಕೊಲೆ ಸಂಖ್ಯೆ 50 ಎನ್ನಲಾಗಿದೆ. ಆದರೆ ಈ ದಾಳಿಯು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ವಿಶ್ವ ಸಮುದಾಯದ ನಾಯಕರು ಖಂಡಿಸಿದ್ದಾರೆ.

9 ಭಾರತೀಯರು ನಾಪತ್ತೆ

ನ್ಯೂಜಿಲೆಂಡ್​ನಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಪ್ರಕಾರ ಕ್ರೖೆಸ್ಟ್​ಚರ್ಚ್ ನಗರದಲ್ಲಿ 30 ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ. ಇವರಲ್ಲಿ 9 ಜನರು ನಾಪತ್ತೆಯಾದ ವರದಿಯಾಗಿದೆ. ಈ ದಾಳಿಯಲ್ಲಿ ಅವರು ಮೃತಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ ಸರ್ಕಾರ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಹೈದರಾಬಾದ್​ನಲ್ಲಿ ಕುಟುಂಬ ಸದಸ್ಯರು ನೀಡಿರುವ ಹೇಳಿಕೆ ಪ್ರಕಾರ, ಸ್ಥಳೀಯ ಹೋಟೆಲ್ ಮಾಲೀಕ ಅಹ್ಮದ್ ಇಕ್ಬಾಲ್ ಜಹಂಗೀರ್ ಮೃತಪಟ್ಟಿದ್ದಾರೆ. ಶೂಟರ್​ನ ಲೈವ್​ಸ್ಟ್ರೀಮ್ಲ್ಲಿ ಜಹಂಗೀರ್​ಗೆ ಗುಂಡು ಹೊಡೆದಿರುವುದು ಕಾಣಿಸಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕಿವೀಸ್ ಬೇಸರ

ಆಸ್ಟ್ರೇಲಿಯಾದಲ್ಲಿ ಬಲಪಂಥೀಯ ಮೂಲಭೂತವಾದಿಗಳ ಕಾರ್ಯಾಚರಣೆ ಮೇಲೆ ನಿಗಾ ಇಡಲಾಗುತ್ತಿಲ್ಲ. ಈ ತಂಡವು ಕಳೆದ 3 ತಿಂಗಳಿಂದ ದಾಳಿಗೆ ಸಂಚು ರೂಪಿಸಿತ್ತು. ಆದರೆ ಸ್ಥಳೀಯ ಸರ್ಕಾರದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದೆ ಎಂದು ನ್ಯೂಜಿಲೆಂಡ್ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ದಾಳಿಯನ್ನು ಆಸ್ಟ್ರೇಲಿಯಾ ಪ್ರಧಾನಿ ಖಂಡಿಸಿದ್ದು, ತನಿಖೆಗೆ ಸಹಕರಿಸುತ್ತೇವೆ. ಆಸ್ಟ್ರೇಲಿಯಾದ ಓರ್ವ ಪ್ರಜೆಯನ್ನು ನ್ಯೂಜಿಲೆಂಡ್ ಬಂಧಿಸಿದೆ ಎಂದು ತಿಳಿಸಿದ್ದಾರೆ.

ಫೇಸ್​ಬುಕ್ ಲೈವ್!

ರಕ್ತಪಾತ ನಡೆಸಿದ ಭಯೋತ್ಪಾದಕ ಆಸ್ಟ್ರೇಲಿಯಾ ಮೂಲದ ಬ್ರೆಂಟನ್ ಟೆರಂಟ್, ಶೂಟೌಟ್​ನ 17 ನಿಮಿಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಿದ್ದಾನೆ. ಆದರೆ ಸರ್ಕಾರದ ಮನವಿ ಮೇರೆಗೆ ಈ ವಿಡಿಯೋಗಳನ್ನು ಬಳಿಕ ಡಿಲೀಟ್ ಮಾಡಲಾಗಿದೆ. ಈ ದಾಳಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ 74 ಪುಟಗಳ ದ್ವೇಷಯುತ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳಿದ್ದು, ಐರೋಪ್ಯ ದೇಶಗಳಲ್ಲಿನ ಜಿಹಾದಿಗೆ ಪ್ರತಿಯಾಗಿ ಪಾಠ ಕಲಿಸಬೇಕಿದೆ ಎಂದು ಹೇಳಿಕೊಂಡಿದ್ದಾನೆ.

ನ್ಯೂಜಿಲೆಂಡ್​ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿ ಇದಾಗಿದೆ. ದಾಳಿ ಪೂರ್ವ ನಿಯೋಜಿತವಾಗಿದ್ದು, ಇದನ್ನು ಹಿಂಸಾಚಾರ ಎಂದು ಪರಿಗಣಿಸಿ ಸುಮ್ಮನಿರಲು ಸಾಧ್ಯವಿಲ್ಲ. ಇದು ನಿರ್ದಿಷ್ಟ ಧರ್ವಿುಯರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಾಗಿದೆ. ಇಂತಹ ಮೂಲಭೂತವಾದಿಗಳನ್ನು ಸಹಿಸಲು ಸಾಧ್ಯವಿಲ್ಲ.

| ಜೆಸಿಂಡಾ ಆರ್ಡನ್ ನ್ಯೂಜಿಲೆಂಡ್ ಪ್ರಧಾನಿ

ಬಾಂಗ್ಲಾ ಕ್ರಿಕೆಟಿಗರು ಬಚಾವ್

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂದಲೆಳೆ ಅಂತರದಿಂದ ಪಾರಾಗಿದೆ. ದಾಳಿ ಆರಂಭವಾದ 2-3 ನಿಮಿಷದ ನಂತರ ಕ್ರೖೆಸ್ಟ್​ಚರ್ಚ್​ನ ಮಸೀದಿಗೆ 17 ಸದಸ್ಯರ ಕ್ರಿಕೆಟ್ ತಂಡ ಭೇಟಿ ನೀಡಿದೆ. ಮಸೀದಿಯ ಮುಖ್ಯದ್ವಾರದ ಬಳಿ ಬಸ್ ಹೋಗುತ್ತಿದ್ದಂತೆ ಗುಂಡಿನ ಸದ್ದು ಕೇಳಿ ಬಸ್ಸನ್ನು ನಿಲ್ಲಿಸಲಾಗಿದೆ. ಗುಂಡಿನ ದಾಳಿಗೆ ಸಿಲುಕಿ ರಕ್ತಸಿಕ್ತರಾಗಿ ಹೊರಗೆ ಓಡಿಬರುತ್ತಿರುವ ಜನರನ್ನು ನೋಡಿ ಈ ಕ್ರಿಕೆಟಿಗರು ಹೌಹಾರಿದ್ದಾರೆ. ಗುಂಡಿನ ಶಬ್ದ ಕೇಳುತ್ತಲೇ ಬಸ್​ನೊಳಗೆ 4-5 ನಿಮಿಷ ಈ ಆಟಗಾರರು ಅವಿತುಕೊಂಡಿದ್ದಾರೆ. ಬಳಿಕ ಬಸ್​ನ್ನು ಅಲ್ಲಿಂದ ಬೇರೆಡೆ ತರಲಾಯಿತು. ಅದೃಷ್ಟವಶಾತ್ ಯಾವುದೇ ದಾಳಿಕೋರರ ಕಣ್ಣಿಗೆ ಈ ಬಸ್ ಕಣ್ಣಿಗೆ ಬಿದ್ದಿಲ್ಲ.

‘ಬಸ್​ನಿಂದ ಇಳಿಯಬೇಕು ಎಂದು ನೋಡುತ್ತಿದ್ದಂತೆ ಹತ್ತಾರು ಜನರು ರಕ್ತಸಿಕ್ತರಾಗಿ ಹೊರಬಂದರು. ಏನಾಗುತ್ತಿದೆ ಎನ್ನುವುದೇ ತಿಳಿಯಲಿಲ್ಲ. ಆದರೆ ಗುಂಡಿನ ಶಬ್ದ ಕೇಳಿ ಶೂಟೌಟ್ ಎನ್ನುವುದು ಖಾತ್ರಿಯಾಯಿತು. ನಮ್ಮೆದುರೇ ಜನರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಚಲನಚಿತ್ರಗಳಲ್ಲಿ ನೋಡುತ್ತಿದ್ದಂತೆ ಭಾಸವಾಯಿತು’ ಎಂದು ಆರಂಭಿಕ ಬ್ಯಾಟ್ಸಮನ್ ತಮೀಮ್ ಇಕ್ಬಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿ ವಿಳಂಬವಾದ ಹಿನ್ನೆಲೆಯಲ್ಲಿ ಈ ಆಟಗಾರರು ಮಸೀದಿಗೆ ಬರುವುದು ತಡವಾಗಿದೆ. ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಶನಿವಾರದಿಂದ ನಡೆಯಬೇಕಿದ್ದ 3ನೇ ಟೆಸ್ಟ್ ರದ್ದಾಗಿದೆ.

- Advertisement -

Stay connected

278,453FansLike
560FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...