More

    ಸಿದ್ಧಗಂಗೆಗೆ ಒಂದು ವರ್ಷದಲ್ಲಿ 48 ಲಕ್ಷ ಮಂದಿ ಭೇಟಿ

    ತುಮಕೂರು:  ಜಿಲ್ಲೆಯಲ್ಲಿ ಅತ್ಯಧಿಕ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುವ ಪ್ರಮುಖ ಧಾರ್ವಿುಕ ಕ್ಷೇತ್ರವಾದ ಸಿದ್ಧಗಂಗಾ ಮಠಕ್ಕೆ ಹಿಂದಿನ ಒಂದು ವರ್ಷದಲ್ಲಿ 48,70,757 ಪ್ರವಾಸಿಗರು ಭೇಟಿ ನೀಡಿದ್ದಾರೆ. ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಜ.21, 2019ರಲ್ಲಿ ಶ್ರೀಗಳು ನಿಧನರಾದ ಬಳಿಕ ಭಕ್ತರ ಪ್ರವಾಹವೇ ಹರಿದುಬಂದಿತ್ತು. ಅಂತಿಮ ದರ್ಶನಕ್ಕೆ 24 ಗಂಟೆಗಳಲ್ಲಿ 15 ಲಕ್ಷ ಭಕ್ತರು ಬಂದಿದ್ದು ಇತಿಹಾಸ. ಸಿದ್ಧಗಂಗೆ ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು

    ಪ್ರವಾಸಿಗರು ಭೇಟಿ ನೀಡುವ ಎಡೆಯೂರು ಸಿದ್ದಲಿಂಗೇಶ್ವರ, ದೇವರಾಯನದುರ್ಗ ಹಾಗೂ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಗಳೂ ಸಹ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳೆಂದು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ಪ್ರತಿ ತಿಂಗಳು ಸರಾಸರಿ 4 ಲಕ್ಷ ಭಕ್ತರು ಭೇಟಿ ನೀಡಿರುವ ಅಂಕಿ- ಅಂಶವನ್ನು ಪ್ರವಾಸೋದ್ಯಮ ಇಲಾಖೆ ನೀಡಿದೆ. ಗದ್ದುಗೆಗೆ ಭೇಟಿ ನೀಡಿದ ಬಳಿಕ ಬೆಟ್ಟದ ಮೇಲಿನ ಸಿದ್ದಲಿಂಗೇಶ್ವರ ಹಾಗೂ ಸಿದ್ದಗಂಗಮ್ಮ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

    ಇನ್ನು ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ 30,10,598 ಮಂದಿ ಸಿದ್ದಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಚಾರಣಪ್ರಿಯರ ನೆಚ್ಚಿನ ತಾಣ ದೇವರಾಯನದುರ್ಗವನ್ನು 27,74,371 ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ 30,52,009 ಭಕ್ತರು ಭೇಟಿ ನೀಡಿ ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ. 2018-19ನೇ ಸಾಲಿನಲ್ಲಿ ಅಂದಾಜು 35-40 ಲಕ್ಷ ಭಕ್ತರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts