48 ಸೂಕ್ಷ್ಮ, 8 ಅತೀ ಸೂಕ್ಷ್ಮ ಮತಗಟ್ಟೆ

ಬ್ಯಾಡಗಿ: ಲೋಕಸಭೆ ಮತದಾನಕ್ಕಾಗಿ ಬ್ಯಾಡಗಿ ವಿಧಾನಸಭೆಯ ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಿದ್ಧರಾಜು ಹೇಳಿದರು.

ಪಟ್ಟಣದ ಮಸ್ಟ್​ರಿಂಗ್ ಕೇಂದ್ರ ಸೇಂಟ್​ಜಾನ್ ಸಂಸ್ಥೆಯ ಪ್ರೌಢಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿ ವಿಧಾನಸಭೆ (85) ಕ್ಷೇತ್ರ ವ್ಯಾಪ್ತಿಯಲ್ಲಿ 1,04,223 ಪುರುಷ ಹಾಗೂ 98,955 ಮಹಿಳಾ ಮತದಾರರು ಸೇರಿ ಒಟ್ಟು 2,03,178 ಜನ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದರು.

241 ಮತಗಟ್ಟೆಗಳಲ್ಲಿ ಮತದಾನ: ಬ್ಯಾಡಗಿ ವಿಧಾನಸಭಾ ಕ್ಷೇತ್ರ ತಾಲೂಕಿನ 128 ಮತಗಟ್ಟೆಗಳು, ರಾಣೆಬೆನ್ನೂರ ತಾಲೂಕಿನ 55, ಹಾಗೂ ಹಾವೇರಿ ತಾಲೂಕಿನ 58 ಮತಗಟ್ಟೆಗಳು ಸೇರಿ ಒಟ್ಟು 241 ಮತಗಟ್ಟೆ ಸ್ಥಾಪಿಸಲಾಗಿದೆ, ಅದರಲ್ಲಿ 48 ಸೂಕ್ಷ್ಮ, 8 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.

ಪಟ್ಟಣದ ಬಡಾವಣೆ ಶಾಲೆ (ಸಂಖ್ಯೆ 139), ತಾಲೂಕಿನ ಇಂಗಳಗೊಂದಿ (ಸಂಖ್ಯೆ 107) ಗ್ರಾಮದ ಪಿಂಕ್ ಮತಗಟ್ಟೆಗಳು, ಗುಮ್ಮನಹಳ್ಳಿ (ಸಂಖ್ಯೆ 118) ಗ್ರಾಮದ ಮಾದರಿ ಮತಗಟ್ಟೆ, ಅಳಲಗೇರಿ (ಸಂಖ್ಯೆ 58) ಗ್ರಾಮದ ಅಂಗವಿಕಲರ ಮತಗಟ್ಟೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಕಾರ್ಯನಿರ್ವಹಿಸಲು 1080 ಸಿಬ್ಬಂದಿ ನಿಯೋಜಿಸಲಾಗಿದೆ.

22 ಸೆಕ್ಟರ್ ಅಧಿಕಾರಿಗಳು, 2 ಬಿಇಎಲ್ ಇಂಜಿನಿಯರ್​ಗಳು ಹಾಗೂ 40 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ ಕಾರ್ಯನಿರ್ವಹಿಸಲಿದ್ದಾರೆ.

ಕ್ಷೇತ್ರದಲ್ಲಿ 46 ರೂಟ್​ಗಳ ಮೂಲಕ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳು ವ್ಯವಸ್ಥೆ ಮಾಡಲಾಗಿದೆ. ಅವುಗಳಿಗೆ 45 ಬಸ್ ಹಾಗೂ 1 ಜೀಪ್ ವ್ಯವಸ್ಥೆ ಮಾಡಲಾಗಿದೆ, 12 ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್ ಅಳವಡಿಸಿದ್ದು, 6 ಮತಗಟ್ಟೆಗಳಲ್ಲಿ ವಿಡಿಯೋ ಮಾಡಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 383 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಕೆಲಸ ನಿರ್ವಹಿಸಲು ಮೋಬೈಲ್ ಸ್ಕಾ್ವಡ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಡಿಎಸ್​ಪಿ ನೇತೃತ್ವದಲ್ಲಿ, 3 ಇನಸ್ಪೆಕ್ಟರ್, 3 ಪಿಎಸ್​ಐ 9 ಎಎಸ್​ಐ, 48 ಹೆಡ್ ಕಾನಸ್ಟೇಬಲ್, 127 ಕಾನಸ್ಟೇಬಲ್, 146 ಹೋಂ ಗಾರ್ಡ್್ಸ ಸೇರಿ 1 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದರು.

ತಹಸೀಲ್ದಾರ್ ಕೆ. ಗುರುಬಸವರಾಜ, ಚುನಾವಣೆ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *