ಎರಡು ಬಸ್‌ ಮುಖಾಮುಖಿ ಡಿಕ್ಕಿಯಾಗಿ 47 ಜನ ಸಾವು

ಹೆರಾರಿ: ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 47 ಜನರು ಮೃತಪಟ್ಟಿರುವ ಘಟನೆ ನೈರುತ್ಯ ಜಿಂಬಾಬ್ವೆಯಲ್ಲಿ ನಡೆದಿದೆ.

ಸರ್ಕಾರಿ ಸ್ವಾಮ್ಯದ ಮಾಧ್ಯಮದ ಪ್ರಕಾರ, ಮುತಾರೆಯಿಂದ ರಾಜಧಾನಿ ಹೆರಾರಿಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಎದುರಿನಿಂದ ಬಂದ ಬಸ್ಸೊಂದು ರುಸಾಪೆ ನಗರದ ಬಳಿ ಡಿಕ್ಕಿ ಹೊಡೆದಿದೆ ಎಂದು ವರದಿ ಮಾಡಿದೆ.

ಘಟನೆಯಲ್ಲಿ 47 ಜನ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಹೆರಾರಿ- ಮುತಾರೆ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಂಬಾಬ್ವೆಯ ಸಾರಿಗೆ ಸಚಿವ ಬಿಗೈ ಮಾತಿಜಾ ಘಟನೆಯನ್ನು ಖಂಡಿಸಿದ್ದು, ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)