45 ದಿನದಲ್ಲಿ ಬೆಳ್ಳಹಳ್ಳಿ ಕ್ವಾರಿ ಭರ್ತಿ: ಬಿಬಿಎಂಪಿಗೆ ಎದುರಾದ ತ್ಯಾಜ್ಯ ವಿಲೇವಾರಿ ಸಮಸ್ಯೆ

ಬೆಂಗಳೂರು: ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲು ಕ್ವಾರಿ ಭರ್ತಿಯಾಗುತ್ತಿದ್ದು, ಬೆಂಗಳೂರಿನಲ್ಲಿ ತ್ಯಾಜ್ಯ ಸಮಸ್ಯೆ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ತ್ಯಾಜ್ಯ ಸಂಸ್ಕರಣೆಗಾಗಿ ಬಿಬಿಎಂಪಿ 7 ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಆದರೆ, ಅವುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬೆಳ್ಳಹಳ್ಳಿಯಲ್ಲಿನ 22 ಎಕರೆ ವಿಸ್ತೀರ್ಣದ ಕಲ್ಲು ಕ್ವಾರಿಯಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಆದರೀಗ, ಆ ಕ್ವಾರಿಯ ಜಾಗ ಭರ್ತಿಯಾಗುತ್ತಿದ್ದು, ಆನಂತರ ಏನು ಎಂಬ ಪ್ರಶ್ನೆ ಬಿಬಿಎಂಪಿ ಅಧಿಕಾರಿಗಳಿಗೆ ಕಾಡತೊಡಗಿದೆ. ಅಲ್ಲದೆ, ಪರ್ಯಾಯ ಭೂಭರ್ತಿ ಪ್ರದೇಶವನ್ನು ಈವರೆಗೆ ಹುಡುಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನಗರದೆಲ್ಲೆಡೆ ತ್ಯಾಜ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.

45 ದಿನಗಳಲ್ಲಿ ಪೂರ್ಣ: ಸದ್ಯ ಬೆಳ್ಳಹಳ್ಳಿಯಲ್ಲಿ ಪ್ರತಿದಿನ 300 ಕಾಂಪ್ಯಾಕ್ಟರ್​ಗಳಿಂದ 2 ಟನ್​ಗೂ ಹೆಚ್ಚಿನ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈಗಿರುವ ಜಾಗದಂತೆ ಇನ್ನು 1 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶವಿದೆ. ಅದನ್ನು ನೋಡಿದರೆ ಇನ್ನು 45 ದಿನಗಳಲ್ಲಿ ಕಲ್ಲು ಕ್ವಾರಿ ಭರ್ತಿಯಾಗಲಿದೆ.

ಎರಡು ಸ್ಥಳ ಭರ್ತಿ

ಈ ಹಿಂದೆ ಬೆಳ್ಳಹಳ್ಳಿ ರೀತಿಯಲ್ಲೇ ಮಿಟ್ಟಗಾನಹಳ್ಳಿ, ಬಾಗಲೂರು ಕಲ್ಲು ಕ್ವಾರಿಗಳಲ್ಲಿ ಪ್ರತಿದಿನ ತಲಾ 80 ಕಾಂಪ್ಯಾಕ್ಟರ್​ಗಳಿಂದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಆದರೀಗ ಆ ಕ್ವಾರಿಗಳು ಭರ್ತಿಗೊಂಡಿದ್ದು, ತ್ಯಾಜ್ಯದ ಮೇಲೆ ಉದ್ಯಾನ ನಿರ್ವಿುಸಲಾಗಿದೆ.

Leave a Reply

Your email address will not be published. Required fields are marked *