44ನೇ ವಯಸ್ಸಿಗೆ ಅಜ್ಜಿ ಆಗುತ್ತಿದ್ದಾರೆ ರವೀನಾ!

ಇನ್ನೂ ಗ್ಲಾಮರ್ ಕಾಯ್ದುಕೊಂಡಿರುವ ಬಾಲಿವುಡ್ ನಟಿ ರವೀನಾ ಟಂಡನ್ 44ನೇ ವಯಸ್ಸಿಗೆ ಅಜ್ಜಿಯಾಗುತ್ತಿದ್ದಾರೆ. ಹೌದು ಈ ವಿಚಾರವನ್ನು ರವೀನಾ ಟಂಡನ್ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗಿನ ಫೋಟೋ ಹಾಕುವ ಮೂಲಕ ತಿಳಿಸಿದ್ದಾರೆ. ಅವರ ಇಬ್ಬರು ದತ್ತು ಮಕ್ಕಳಾದ ಪೂಜಾ ಮತ್ತು ಛಾಯಾ ಇವರಲ್ಲಿ ಛಾಯಾ ಗರ್ಭಿಣಿಯಾಗಿರುವುದಾಗಿ ಟಂಡನ್ ಖುಷಿ ಹಂಚಿಕೊಂಡಿದ್ದಾರೆ. ‘ನಾನು ಮತ್ತು ನನ್ನ ಸಂಸಾರ. ನನ್ನ ಮಗುವಿನ ಮಗು. ಇದಕ್ಕೆ ಕೌಂಟ್​ಡೌನ್ ಶುರುವಾಗಿದೆ’ ಎಂದು ಮಕ್ಕಳು, ಫ್ಯಾಮಿಲಿ ಜತೆಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ ರವೀನಾ. 1995ರಲ್ಲಿ ಟಂಡನ್ ಅವರು ಪೂಜಾ ಮತ್ತು ಛಾಯಾರನ್ನು ದತ್ತು ಪಡೆದುಕೊಂಡಿದ್ದರು. 2014ರಲ್ಲಿ ನಿರ್ವಪಕ ಅನಿಲ್ ತಡಾನಿಯನ್ನು ವರಿಸಿದ ಟಂಡನ್​ಗೆ 14 ವರ್ಷದ ರಶಾ ಮತ್ತು 11 ವರ್ಷದ ರಣ್​ಬೀರ್ ಎಂಬ ಮಕ್ಕಳೂ ಇದ್ದಾರೆ. ಛಾಯಾ 2016ರಲ್ಲಿ ಶಾನ್ ಮೆಂಡಿಸ್ ಎಂಬವರನ್ನು ವಿವಾಹವಾಗಿದ್ದರು. ರವೀನಾ ಟಂಡನ್ ಅವರೀಗ ‘ರಾಕಿಂಗ್ ಸ್ಟಾರ್’ ಯಶ್ ಜತೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಹಿಂದೆ 1999ರಲ್ಲಿ ‘ಉಪೇಂದ್ರ’ ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಬರೋಬ್ಬರಿ 20 ವರ್ಷಗಳ ಬಳಿಕ ಚಂದನವನದತ್ತ ಮುಖ ಮಾಡಿರುವುದಕ್ಕೆ ಅಭಿಮಾನಿಗಳು ಖಷಿ ಆಗಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *