ನನ್ನ ಪತ್ನಿ ಪದವೀಧರ ಶಿಕ್ಷಕಿಯಾಗಿ ನೇಮಕವಾಗಿದ್ದು, ನೇಮಕಾತಿಗೆ 2 ತಿಂಗಳು ಮುನ್ನ ಹೆರಿಗೆ ಆಗಿದೆ. ಹೆರಿಗೆ ರಜೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಳಿ ಕೇಳಿದಾಗ, ‘ಹೊಸದಾಗಿ ನೇಮಕವಾಗಿರುವುದರಿಂದ ಹೆರಿಗೆ ರಜೆ ಮಂಜೂರು ಸಾಧ್ಯವಿಲ್ಲ, ವೇತನರಹಿತ ರಜೆ ತೆಗೆದುಕೊಳ್ಳಬಹುದು’ ಎಂದಿದ್ದಾರೆ. ಇದು ಸರಿಯೇ?

| ಮಕ್ಕಬುಲ್ ಮೊಹಮ್ಮದ್ ಲಿಂಗದಹಳ್ಳಿ, ಹಾವೇರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 135ರ ಪ್ರಕಾರ ಸರ್ಕಾರಿ ಕೆಲಸಕ್ಕೆ ಸೇರಿದ ಮಹಿಳಾ ನೌಕರರಿಗೆ 180 ದಿನ ಹೆರಿಗೆ ರಜೆ ನೀಡಲಾಗುತ್ತದೆ. ಆದರೆ, ನಿಮ್ಮ ಪತ್ನಿ ಕೆಲಸಕ್ಕೆ ಸೇರುವ ಮೊದಲೇ ಮಗುವಿಗೆ ಜನ್ಮ ನೀಡಿದ್ದು, ಆಕೆಗೆ ಹೆರಿಗೆ ರಜೆ ಸೌಲಭ್ಯ ಲಭ್ಯವಾಗುವುದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದಂತೆ ಮಗುವಿನ ಆರೈಕೆಗೆ ವೇತನರಹಿತ ರಜೆ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.