More

    400 ಲೀಟರ್ ಹಾಲು ಮಣ್ಣು ಪಾಲು

    ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.
    ನಾಗಮಂಗಲ, ಬಸರಾಳು ಹೋಬಳಿಯ ವಿವಿಧ ಕಡೆಗಳಿಂದ ಸಂಗ್ರಹಿಸಿಕೊಂಡು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಬರುತ್ತಿದ್ದ ಲಾರಿ ಬಸರಾಳಿನಿಂದ ಕೊಪ್ಪಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ.

    ಹಾಲಿನ ಟ್ಯಾಂಕ್‌ನಲ್ಲಿ ಎರಡು ವಿಭಾಗಗಳಿದ್ದು, ಒಂದು ಸಂಪೂರ್ಣ ಭರ್ತಿಯಾಗಿತ್ತು. ಮತ್ತೊಂದರಲ್ಲಿ 300ರಿಂದ 400 ಲೀಟರ್ ಹಾಔಖಿ ಇತ್ತು. ಭರ್ತಿಯಾಗಿದ್ದ ಟ್ಯಾಂಕ್‌ನ ಮುಚ್ಚುಳವನ್ನು ಭದ್ರಪಡಿಸಲಾಗಿತ್ತು. ಆದರೆ, ಕಡಿಮೆ ಹಾಲಿದ್ದ ಟ್ಯಾಂಕ್‌ಗೆ ಮುಂದೆ ಹಾಲು ಸಂಗ್ರಹಿಸಬೇಕಿದ್ದ ಕಾರಣ ಮುಚ್ಚುಳವನ್ನು ಲಾಕ್ ಮಾಡಿರಲಿಲ್ಲ.

    ಲಾರಿ ಉರುಳಿ ಬೀಳುತ್ತಿದ್ದಂತೆ ಅದರ ಮುಚ್ಚಳ ತೆರೆದುಕೊಂಡು ಹಾಲು ಚರಂಡಿಯಲ್ಲಿ ಹರಿದು ಮಣ್ಣುಪಾಲಾಯಿತು. ಸ್ಥಳಕ್ಕೆ ಆಗಮಿಸಿದ ಮನ್‌ಮುಲ್ ಅಧಿಕಾರಿಗಳು ಕ್ರೇನ್ ಮೂಲಕ ಲಾರಿಯನ್ನ ಎತ್ತಿಸಿ ಕೊಂಡೊಯ್ದರು.
    ಅದೃಷ್ಟವಶಾತ್ ಲಾರಿಯಲ್ಲಿದ್ದವರು ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ. ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts