ಟರ್ಕಿ: ಸುಮಾರು 400 ಇಂಡಿಯೋ ವಿಮಾನಗಳ ಪ್ರಯಾಣಿಕರು ಕಳೆದ 24 ಗಂಟೆಗೂ ಹೆಚ್ಚು ಅವಧಿ ಟರ್ಕಿಯ ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲೇ ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ. ಈ ವಿಷಯ ಇದೀಗ ನೆಟ್ಟಿಗರನ್ನು ಕೆರಳಿಸಿದ್ದು, ಇಂಡಿಗೋ ವಿಮಾನಯಾನ ಸಂಸ್ಥೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿದೆ. ಪ್ರಯಾಣಿಕರ ದೀರ್ಘಕಾಲದ ಕಾಯುವಿಕೆಗೆ ಸಂಸ್ಥೆಯ ಬೇಜವಾಬ್ದಾರಿತನವೇ ಕಾರಣ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.
ಅಷ್ಟಕ್ಕೂ ಏನಾಗಿದೆ?
ಇಸ್ತಾನ್‌ಬುಲ್‌ನಿಂದ ದೆಹಲಿ ಮತ್ತು ಮುಂಬೈಗೆ ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಸಬೇಕಿದ್ದ ಸುಮಾರು 400ಕ್ಕೂ ಹೆಚ್ಚು ಪ್ರಯಾಣಿಕರು ಸುಮಾರು 24 ಗಂಟೆಗಳಿಗೂ ಹೆಚ್ಚು ಕಾಲ ಅಂದರೆ ಒಂದು ದಿನವನ್ನು ಮೀರಿ ಟರ್ಕಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಕಾದು ಕೂರುವಂತ ಪರಿಸ್ಥಿತಿ ಎದುರಾಗಿದೆ. ಬುಧವಾರ (ಡಿ.11) ರಾತ್ರಿ ದೆಹಲಿ (6E 12) ಮತ್ತು ಮುಂಬೈ (6E 18) ಗೆ ಪ್ರಯಾಣಿಸಬೇಕಾಗಿದ್ದ ವಿಮಾನಗಳು ಶುಕ್ರವಾರ ಬೆಳಗ್ಗೆ ಏರ್ಪೋರ್ಟ್ಗೆ ಬಂದಿಳಿದಿದೆ. ಅಲ್ಲಿಗೆ ಬರೋಬ್ಬರಿ 39 ಗಂಟೆಗಳ ವಿಳಂಬ ನಮಗಾಗಿದೆ ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಗುಡುಗಿದ್ದಾರೆ.
ಸರಿಯಾದ ಉತ್ತರ ಮತ್ತು ಸೂಕ್ತ ಕಾರಣವಿಲ್ಲ
ದೆಹಲಿ ಮತ್ತು ಮುಂಬೈಗೆ ಇಸ್ತಾನ್‌ಬುಲ್‌ನಿಂದ ತೆರಳಬೇಕಿದ್ದ ಇಂಡಿಗೋ ವಿಮಾನಗಳ ವಿಳಂಬಕ್ಕೆ ಸರಿಯಾದ ಉತ್ತರ ಮತ್ತು ಸೂಕ್ತ ಕಾರಣವನ್ನು ವಿಮಾನಯಾನ ಸಂಸ್ಥೆ ನೀಡಿಲ್ಲ ಎಂದು ಹೇಳಲಾಗಿದೆ. ಇಲ್ಲಿರುವ 400ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ ಮಕ್ಕಳು, ಹಿರಿಯರು ಸೇರಿದಂತೆ ಇತರೆ ವಯಸ್ಸಿನವರಿದ್ದಾರೆ. ವಿಮಾನ ವಿಳಂಬ ಎಂದು ಹೇಳುವ ಸಂಸ್ಥೆ, ಪ್ರಯಾಣಿಕರ ಯೋಗಕ್ಷೇಮ ವಿಚಾರಿಸುವಲ್ಲಿ ಏಕಿಷ್ಟು ನಿರ್ಲಕ್ಷ್ಯ ತೋರಿದೆ? ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.
Hey @IndiGo6E , your handling of flight 6E0018 from Istanbul to Mumbai on Dec 12 has been a disaster. Scheduled to depart at 8:15 PM, it was delayed to 11 PM on the same day. Fine, we waited. Then it was shockingly pushed to 10 AM the next day. What’s going on?
— Parshwa Mehta (@parshwa_1995) December 12, 2024
ಉಳಿದುಕೊಳ್ಳುವ ವ್ಯವಸ್ಥೆಯೂ ಇಲ್ಲ
ರಾತ್ರಿಯಿಂದ ಬೆಳಗ್ಗೆಯವರೆಗೂ ಕಾದಿರುವ ಪ್ರಯಾಣಿಕರಿಗೆ ಊಟ, ನಿದ್ದೆಯಿಲ್ಲ. ವಿಳಂಬವಾಗಿದೆ ಎಂದು ಹೇಳಲು ಗೊತ್ತಿರುವ ಇಂಡಿಗೋ ಸಂಸ್ಥೆ, ಪ್ರಯಾಣಿಕರಿಗೆ ಉಳಿದುಕೊಳ್ಳುವ ಯಾವುದೇ ವ್ಯವಸ್ಥೆಯನ್ನೂ ಸಹ ಒದಗಿಸಿಲ್ಲ. 24 ಗಂಟೆಗಳ ಕಾಲ ಪ್ರಯಾಣಿಕರನ್ನು ಕಾಯಿಸುವ ಇವರಿಗೆ ನಾಚಿಕೆಯಾಗಬೇಕು ಎಂದು ಪ್ರಯಾಣಿಕರು ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ,(ಏಜೆನ್ಸೀಸ್).
ಹುಚ್ಚಾಟ ಮೆರೆದ ಡ್ರೋನ್ ಪ್ರತಾಪ್ ಬಂಧನ! ಯಾವ ಪ್ರಕರಣದಡಿ ಕೇಸ್ ದಾಖಲು? ಹೀಗಿದೆ ವಿವರ…
ಇಂದೇ ‘ದಾಸ’ನ ಜಾಮೀನು ಭವಿಷ್ಯ: ಬೇಲ್ ಸಿಗದಿದ್ರೆ ಆರೋಪಿ ದರ್ಶನ್ ಮುಂದಿರುವ ಕೊನೇ ಆಯ್ಕೆಗಳಿವು