400ಕ್ಕೂ ಹೆಚ್ಚು ಶಾಲೆಗಳಿಗೆ ಬೀಗ

ಲಕ್ಷ್ಮೇಶ್ವರ: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು. 9ರಂದು ರಾಜ್ಯಾದ್ಯಂತ ಕರೆ ನೀಡಿರುವ ಬಂದ್​ಗೆ ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರು ಬೆಂಬಲ ವ್ಯಕ್ತಪಡಿಸಿದರು.

ಬಂದ್ ಬೆಂಬಲಿಸಿ ತಾಲೂಕಿನ 700ಕ್ಕೂ ಹೆಚ್ಚು ಶಿಕ್ಷಕರು ಜಿಲ್ಲಾ ಮಟ್ಟದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡರು. ಪ್ರತಿಭಟನೆಯಿಂದ ತಾಲೂಕಿನ 400ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಬೀಗ ಹಾಕಿದ್ದರಿಂದ 1ರಿಂದ 6ನೇ ತರಗತಿವರೆಗಿನ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಿಂದ ದೂರ ಉಳಿಯಬೇಕಾಯಿತು.

ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರ ಸಂಘ, ಪ್ರಾಥಮಿಕ ಶಾಲೆ (ಗ್ರಾಮೀಣ) ಶಿಕ್ಷಕರ ಸಂಘ ಹೀಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಬಂದ್ ಬೆಂಬಲಿಸಿ ತಾಲೂಕಿನಿಂದ ತೆರಳಿದ್ದ ಶಿಕ್ಷಕರ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹರ್ಲಾಪುರ, ಎಫ್.ಎನ್. ಗೋಣೆಪ್ಪನವರ, ಡಿ.ಎನ್. ದೊಡ್ಡಮನಿ, ಸತೀಶ ಬೋಮಲೆ, ಎಸ್.ಪಿ, ಕಟ್ಟೆಣ್ಣವರ, ಎಂ.ಡಿ. ವಾರದ, ಎಸ್.ಎನ್. ಶಿಗ್ಲಿ, ಆರ್.ಎಂ. ಶಿರಹಟ್ಟಿ, ಜೆ.ಎಸ್. ಗುಡಗೇರಿ, ಬಿ.ಬಿ. ಯತ್ತಿನಹಳ್ಳಿ, ಎಚ್.ಬಿ. ಪಟ್ಟಣದ, ಡಿ.ಎ. ಹಲಗೋಡದ, ಎಸ್.ಎನ್. ತಾಯಮ್ಮನವರ, ಪಿ.ಬಿ. ಕರ್ಜಗಿ, ಎಸ್.ಆರ್. ಹಿರೇಮಠ ಇತರರಿದ್ದರು.