ಉತ್ತರ ಪ್ರದೇಶ : ( chocolate stuck throat ) ಸಾಮಾನ್ಯವಾಗಿ ಮಕ್ಕಳಿಗೆ ಚಾಕಲೇಟ್ ಎಂದರರೆ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಇಂತಹ ಸಿಹಿ ಚಾಕಲೇಟ್‌ಗಳು ಬಾಲಕನ ಪ್ರಾಣವನ್ನೇ ತೆಗೆದಿದೆ. ನಾಲ್ಕು ವರ್ಷದ ಮಗು ಚಾಕಲೇಟ್ ತಿನ್ನುವ ವೇಳೆ ಸಾವನ್ನಪ್ಪಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ದಾರುಣ ಘಟನೆ ನಡೆದಿದೆ.
ಜಿಗುಟಾದ ಚಾಕೊಲೇಟ್ ಅನ್ನು ತಿನ್ನುತ್ತಿದ್ದಾಗ ಅದು ಗಂಟಲಿಗೆ ಸಿಲುಕಿಕೊಂಡಿತು. ಕೂಡಲೇ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ದೌಡಾಯಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿನ ವೈದ್ಯರಿಗೆ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ಪೋಷಕರು ಬಾಲಕನನ್ನು ಮೂರ್ನಾಲ್ಕು ಆಸ್ಪತ್ರೆಗಳಿಗೆ ಕರೆದೊಯ್ದರು.
ಬಾಲಕನಿಗೆ ಎಲ್ಲಿಯೂ ಚಿಕಿತ್ಸೆ ಸಿಗದ ಕಾರಣ ಸುಮಾರು ಮೂರು ಗಂಟೆಗಳ ಕಾಲ ಹೋರಾಟ ನಡೆಸಿದರೂ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆಯಲ್ಲಿ ಸ್ಥಳೀಯರೆಲ್ಲ ದುಃಖದಲ್ಲಿ ಮುಳುಗಿದ್ದರು. ಪೋಷಕರು ಕಣ್ಣೀರಿಡುತ್ತಿದ್ದಾರೆ.