ತಾವು ಮಾಡಿದ ಸಣ್ಣ ತಪ್ಪಿಗೆ ತಾವೇ ಬಲಿಯಾದ ಮಕ್ಕಳು: ಬಿರುಗಾಳಿಗೆ ತೋಟದ ಮನೆ ಕುಸಿದು ಇಬ್ಬರು ಸಾವು

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅವಘಡಗಳಲ್ಲಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಬಗ್ಗೆ ಬುಧವಾರ ವರದಿಯಾಗಿದೆ.

ಬುಧವಾರ ಸಂಜೆ ಜಿಲ್ಲೆಯ ಆಳಂದದ ಪಿ.ಎಮ್​​​ ತಾಂಡದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್​​​ನಲ್ಲಿ ಆಟವಾಡುತ್ತಿದ್ದ ಸುಪ್ರಿಯಾ (7) ಮತ್ತು ರೋಹನ್​​​​​ (6) ಗೇರ್​​ನಲ್ಲಿದ್ದ ಟ್ರ್ಯಾಕ್ಟರ್​​​​ನ್ನು ನ್ಯೂಟಲ್​​​​​​ ಮಾಡಿದ್ದಾರೆ. ಈ ವೇಳೆ ಮುಂದಕ್ಕೆ ಚಲಿಸಿ ಕೊನೆಗೆ ಪಲ್ಟಿಯಾಗಿದೆ. ಇಬ್ಬರು ಮಕ್ಕಳು ಟ್ರ್ಯಾಕ್ಟರ್​ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಪಲ್ಟಿ ಆಗುತ್ತಿದ್ದಂತೆಯೆ ಟ್ರ್ಯಾಕ್ಟರ್ ಸವಾರ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಅಳಂದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಸೇಡಂ ತಾಲೂಕಿನ ಕಾನಗಡ್ಡಾ ಗ್ರಾಮದ ಹೊರಲವಯದಲ್ಲಿ ಭಾರಿ ಗಾಳಿಯಿಂದ ತೋಟದ ಮನೆ ಕುಸಿದು ರಾಜಶ್ರೀ ರವಿಕುಮಾರ್​ (32), ಸಮೃದ್ಧ ಮೋಹನ ರೆಡ್ಡಿ (11) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುದೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಅನೇಕ ಕಡೆ ಸುರಿದ ಮಳೆಯಿಂದ ಬುಧವಾರ ಜನಜೀವನ ಅಸ್ತವ್ಯಸ್ತಗೊಂಡಿದೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *