ಐಸಿಸಿ ವಿಶ್ವಕಪ್​ನ 20, 21ನೇ ಪಂದ್ಯಗಳಲ್ಲಿ ಹೋರಾಟ ನಡೆಸಲು ಸಜ್ಜಾಗಿರುವ ವಿಶ್ವದ ಪ್ರಮುಖ ನಾಲ್ಕು ತಂಡಗಳು

ಲಂಡನ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನಲ್ಲಿ ಶನಿವಾರ ಎರಡು ಪಂದ್ಯಗಳು ನಡೆಯಲಿದ್ದು, ಹಾಲಿ ಚಾಂಪಿಯನ್​​ ಆಸ್ಟ್ರೇಲಿಯಾ ಹಾಗೂ ಮಾಜಿ ಚಾಂಪಿಯನ್​​​​​ ಶ್ರೀಲಂಕಾ ಹೋರಾಟ ನಡೆಸಲು ಸಿದ್ಧವಾಗಿವೆ. ಎರಡು ಪಂದ್ಯಗಳಿಗೂ ಮಳೆಯ ಭೀತಿ ಕಾಡುತ್ತಿದೆ.

ಇಲ್ಲಿನ ಕೆನ್ನಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು 20ನೇ ಪಂದ್ಯದಲ್ಲಿ ಸೆಣೆಸಿದರೆ, 21ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಕಾಡ್ರಿಫ್​ನ ಸೊಫಿಯಾ ಗಾರ್ಡನ್ಸ್​​ನಲ್ಲಿ ಪ್ರದರ್ಶನ ತೋರಲಿವೆ.

ಆಸ್ಟ್ರೇಲಿಯಾ ತಂಡ ಪ್ರಸಕ್ತ ಸಾಲಿನ ವಿಶ್ವಕಪ್​ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರರಲ್ಲಿ ಜಯ ಸಾಧಿಸಿ ಒಂದರಲ್ಲಿ ಸೋಲನುಭವಿಸಿದೆ. ಶ್ರೀಲಂಕಾ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ಹಾಗೂ ಮತ್ತೊಂದರಲ್ಲಿ ಪರಾಭವಗೊಂಡರೆ, ಉಳಿದ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದೆ. ವಿಶ್ವಕಪ್​​ ಅಂಕಪಟ್ಟಿಯಲ್ಲಿ ಆಸೀಸ್​​​​ 3ನೇ ಸ್ಥಾನದಲ್ಲಿದ್ದರೆ, ಲಂಕಾ 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಜಯ ಅನಿವಾರ್ಯವಾಗಿದೆ.

ವಿಶ್ವಕಪ್​​ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾಗೆ ಈ ಪಂದ್ಯ ಪ್ರಮುಖವಾಗಿದೆ. ತಂಡ ಆಡಿರುವ ಮೂರು ಪಂದ್ಯಗಳಲ್ಲಿಯೂ ಸೋತಿದ್ದರೆ, ಮತ್ತೊಂದು ಮಳೆಯಿಂದ ರದ್ದಾಗಿ ಕೇವಲ ಒಂದು ಅಂಕ ಪಡೆದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನೂ ಅಪಘಾನಿಸ್ತಾನ ಮೂರಕ್ಕೆ ಮೂರು ಪಂದ್ಯಗಳಲ್ಲಿ ತೀರಾ ಕಳಪೆ ಆಟವಾಡಿ ಸೋಲಿಗೆ ಶರಣಾಗಿದೆ. ಇದರೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳು ಕಳೆದ 11 ಆವೃತ್ತಿಗಳಲ್ಲಿಯೂ ಕಪ್​​ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. (ಏಜೇನ್ಸೀಸ್​)

Leave a Reply

Your email address will not be published. Required fields are marked *