ಚರ್ಚ್​ನಲ್ಲಿ ಗುಂಡಿನ ದಾಳಿ ನಡೆಸಿ ತಾನೂ ಶೂಟ್‌ ಮಾಡಿಕೊಂಡ ಟೆಕ್ಕಿ, ನಾಲ್ವರು ಸಾವು

ಸಾವೊ ಪೌಲೊ(ಬ್ರೆಜಿಲ್): ಚರ್ಚ್‌ವೊಂದಕ್ಕೆ ಏಕಾಏಕಿ ಆಗಮಿಸಿದ ಗನ್‌ಮ್ಯಾನ್‌ ಒಬ್ಬಾತ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಬ್ರೆಜಿಲ್‌ನ ಸಾವೊ ಪೌಲೊ ನಗರದ ಸಮೀಪದಲ್ಲಿರುವ ಕ್ಯಾಥೋಲಿಕ್ ಕ್ಯಾಥೆಡ್ರಲ್‌ನಲ್ಲಿ ನಡೆದಿದೆ.

ಟೆಕ್‌ ಕಂಪನಿಯ ಉದ್ಯೋಗಿಯಾಗಿದ್ದ ಗನ್‌ಮ್ಯಾನ್‌ ಚರ್ಚ್‌ ಒಳಗೆ ಬಂದು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವುದನ್ನು ಗಮನಿಸಿ ಸುಮಾರು 20 ಬಾರಿ ಪ್ರಾರ್ಥನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಬ್ರೆಜಿಲಿಯನ್‌ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸುವ ಮುನ್ನವೇ 49 ವರ್ಷದ ಶೂಟರ್‌ ತಾನು ಕೂಡ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.
ಸದ್ಯ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಸೀರಾ ರಾಜ್ಯದ ಮಿಲಾಗ್ರೆಸ್ ನಗರದಲ್ಲಿನ ಎರಡು ಬ್ಯಾಂಕುಗಳಲ್ಲಿ ದರೋಡೆಗೆ ಯತ್ನಿಸಿದ ವೇಳೆ ಶಸ್ತ್ರ ಸಜ್ಜಿತ ದರೋಡೆಕೋರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಆರು ಜನ ಕಳ್ಳರು, ಓರ್ವ ಮಗು ಸೇರಿ 12 ಜನ ಮೃತಪಟ್ಟಿದ್ದರು. (ಏಜೆನ್ಸೀಸ್)