ಈ ನಾಲ್ವರು ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್ ಮೇಲೆ​ ಹೆಚ್ಚಿದೆ ಭಾರೀ ನಿರೀಕ್ಷೆ! ಅಂದುಕೊಂಡಂತೆ ಮಾಡ್ತಾರಾ ಮೋಡಿ? | IPL 2025

blank

IPL 2025: ಐಪಿಎಲ್​ 18ನೇ ಆವೃತ್ತಿಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಯಾವ ದಿನ ಶುರುವಾಗಲಿದೆ ಹಾಗೂ ಮುಕ್ತಾಯವಾಗಲಿದೆ ಎಂಬ ವೇಳಾಪಟ್ಟಿಯೂ ಈಗಾಗಲೇ ಅಧಿಕೃತವಾಗಿ ಹೊರಬಿದ್ದಿದೆ. ಮಾರ್ಚ್​ 23ರಿಂದ ಐಪಿಎಲ್​ ಪಂದ್ಯಗಳು ಆರಂಭವಾಗಲಿದೆ ಎಂಬ ಸುದ್ದಿ ಕ್ರಿಕೆಟ್ ಪ್ರಿಯರಲ್ಲಿ ಕಾತರವನ್ನು ಹೆಚ್ಚಿಸಿದೆ. 10 ಬಲಿಷ್ಠ ತಂಡಗಳು 2025ರ ಐಪಿಎಲ್ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿದೆ. ಸ್ಟಾರ್ ಹಾಗೂ ಯುವ ಆಟಗಾರರಿಂದ ಕೂಡಿರುವ ಟೀಮ್​ಗಳು ಯಾವ ಮಟ್ಟಿಗೆ ಪೈಪೋಟಿ ಕೊಡಲಿದೆ ಎಂಬುದೇ ಸದ್ಯ ಕುತೂಹಲ.

ಇದನ್ನೂ ಓದಿ: ಜ.18, 19ಕ್ಕೆ ಬ್ರಾಹ್ಮಣ ಮಹಾ ಸಮ್ಮೇಳನ; ಮಹಾಸಭಾ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮ

ಕಳೆದ ವರ್ಷ ನವೆಂಬರ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿ ಬಿಡ್ಡಿಂಗ್​ ಮಾಡಿದ 10 ತಂಡಗಳು, ಉತ್ತಮ ಆಲ್​ರೌಂಡರ್, ಬ್ಯಾಟರ್​, ಬೌಲರ್​ಗಳನ್ನೇ ತಮ್ಮ ಟೀಮ್​ಗೆ ಆಯ್ದುಕೊಂಡಿದೆ. ಈ ಹಿಂದೆ ಇದ್ದ ತಂಡಗಳು ಇದೀಗ ಬಹುತೇಕ ಬದಲಾಗಿದ್ದು, ಹೊಸ ಕ್ಯಾಪ್ಟನ್, ಹೊಸ ಕೀಪರ್​ಗಳಿಂದಲೇ ತಂಡಗಳು ಮೈದಾನಕ್ಕಿಳಿಯಲಿರುವುದು ಆಟದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬೌಲರ್​ ಮತ್ತು ಬ್ಯಾಟರ್​ಗಳಿಗಿಂತ ಈ ಬಾರಿ ವಿಕೆಟ್ ಕೀಪರ್​-ಬ್ಯಾಟರ್​ಗಳ ಮೇಲೆ ಭಾರೀ ಭರವಸೆ ಹಾಗೂ ನಿರೀಕ್ಷೆಗಳು ಮೂಡಿವೆ.

17ನೇ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಲವು ಸ್ಟಾರ್ ವಿಕೆಟ್​ ಕೀಪರ್​-ಬ್ಯಾಟರ್​ಗಳ ಮೇಲೆ ಈ ವರ್ಷವು ನಿರೀಕ್ಷೆ ಹೆಚ್ಚಾಗಿದೆ. ಆದರೆ, 18ನೇ ಆವೃತ್ತಿಯಲ್ಲಿ ಇದು ದುಪ್ಪಟ್ಟು ಎಂಬುದು ಗಮನಾರ್ಹ. ಅಸಲಿಗೆ ಯಾರೆಲ್ಲಾ ಈ ಪಟ್ಟಿಯಲ್ಲಿದ್ದಾರೆ? ಯಾರ ಮೇಲೆ ಹೆಚ್ಚಿನ ನಿರೀಕ್ಷೆ ಎಂಬುದರ ವಿವರ ಹೀಗಿದೆ ಗಮನಿಸಿ.

ಕೆ.ಎಲ್​. ರಾಹುಲ್​

17ನೇ ಸೀಸನ್​ನಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡದ ಕ್ಯಾಪ್ಟನ್ ಆಗಿದ್ದ ಕನ್ನಡಿಗ ಕೆ.ಎಲ್​. ರಾಹುಲ್​, ಟೀಮ್​ನ ಗೆಲುವಿನೆಡೆಗೆ ಸಾಗಿಸುವಲ್ಲಿ ವಿಫಲರಾದರು. ನಾಯಕನಾಗಿ ತನ್ನ ಆಟವನ್ನು ಅಲ್ಲಲ್ಲಿ ಉತ್ತಮವಾಗಿ ಪ್ರದರ್ಶಿಸಿದ್ದೇ ಆದರೂ ತಂಡಕ್ಕೆ ಗೆಲುವು ತಂದುಕೊಡಲಿಲ್ಲ ಎಂಬ ಬೇಸರ ಎಲ್​ಎಸ್​ಜಿ ಮಾಲೀಕರಿಗಿತ್ತು. ಇದೇ ಕಾರಣಕ್ಕೆ ರಾಹುಲ್​ರನ್ನು ಮೈದಾನದಲ್ಲೇ ಅವಮಾನಿಸಿ, ಅಂದು ಕ್ರಿಕೆಟ್​ ಪ್ರಿಯರ ಕೆಂಗಣ್ಣಿಗೆ ಗುರಿಯಾದರು. ಈಗ 18ನೇ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​ ಆಗಿ ತಂಡವನ್ನು ಮುನ್ನಡೆಸಲಿರುವ ರಾಹುಲ್​ ಮೇಲೆ ಅಪಾರ ನಿರೀಕ್ಷೆಗಳಿವೆ.

ಎಂ.ಎಸ್​. ಧೋನಿ

ಕಳೆದ ಸೀಸನ್​ ಅತ್ಯಧಿಕ ರನ್​ ಸ್ಕೋರರ್ ಆಗಿ ಹೊರಹೊಮ್ಮದೇ ಹೋದರೂ, ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸದೆ ಇದ್ದರೂ ತಮ್ಮ ಆಟವನ್ನು ಧೋನಿ ಅದ್ಭುತವಾಗಿ ಪ್ರದರ್ಶಿಸಿದರು. 5-6ನೇ ಕ್ರಮಾಂಕದಲ್ಲಿ ಬಂದರು ಕೂಡ ಅಬ್ಬರದ ಬ್ಯಾಟಿಂಗ್ ಮಾಡುವಲ್ಲಿ ಧೋನಿ ಹಿಂದುಳಿಯಲಿಲ್ಲ. ನಿವೃತ್ತಿ ಪಡೆಯುವ ಸಮಯದಲ್ಲಿಯೂ ಸಿಎಸ್​ಕೆಗೆ ಬೆನ್ನುಲುಬಾಗಿರುವ ಕ್ಯಾಪ್ಟನ್ ಕೂಲ್, 2025ರಲ್ಲಿ ಆದರೂ ತಂಡಕ್ಕೆ ತಂದುಕೊಟ್ಟು ಸಂತಸದ ನಿವೃತ್ತಿ ಪಡೆಯಲು ಇಚ್ಛಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದಂತೆಯೇ ಈ ವರ್ಷವು ಅವರ ಆರ್ಭಟ ಜೋರಿರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

ಹೆನ್ರಿಕ್ ಕ್ಲಾಸೆನ್

ಸನ್​ರೈಸರ್ಸ್​ ಹೈದರಾಬಾದ್​ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರುವ ಹೆನ್ರಿಕ್ ಕ್ಲಾಸೆನ್, ತಮ್ಮ ಬ್ಯಾಟಿಂಗ್​ ಶೈಲಿಗೆ ಹೆಚ್ಚು ಹೆಸರುವಾಸಿ. ಓಪನಿಂಗ್ ಅಥವಾ ಮಧ್ಯಮ ಕ್ರಮಾಂಕ ಯಾವುದೇ ಇರಲಿ ತಮ್ಮ ಆಟವನ್ನು ಎಂದಿಗೂ ಬಿಟ್ಟುಕೊಡದ ಕ್ಲಾಸೆನ್​, ಪವರ್​ಫುಲ್ ಹಿಟ್ಟಿಂಗ್​ ಮೂಲಕವೇ ಮೈದಾನದಲ್ಲಿ ಹೆಚ್ಚು ಸದ್ದು ಮಾಡುತ್ತಾರೆ. ಎಂದಿನಂತೆ ಈ ವರ್ಷವು ಅವರ ಮೇಲೆ ದುಪ್ಪಟ್ಟಿನ ನಿರೀಕ್ಷೆಯಿದೆ.

ಜಾಸ್​ ಬಟ್ಲರ್​

ರಾಜಸ್ಥಾನ ರಾಯಲ್ಸ್​ಗೆ ಆಧಾರ ಸ್ಥಂಬವಾಗಿರುವ ಜಾಸ್​ ಬಟ್ಲರ್​, ಇತ್ತ ಓಪನಿಂಗ್ ಬ್ಯಾಟರ್​ ಆಗಿಯೂ ಸೈ, ಅತ್ತ ಚಾಣಾಕ್ಷ ಕೀಪಿಂಗ್​ಗೂ ಜೈ. ರಾಯಲ್ಸ್​ ಪರ ಮೈದಾನದಲ್ಲಿ ಓಪನಿಂಗ್​ ಇಳಿಯುವ ಬಟ್ಲರ್​, ಶತಕ ಇಲ್ಲದೆ ಹೋದರೂ ಅರ್ಧ ಶತಕ ಸಿಡಿಸದೆ ಪೆವಿಲಿಯನ್​ನತ್ತ ಮುಖ ಮಾಡುವುದು ತೀರ ಕಡಿಮೆ. ಸಿಕ್ಸರ್​ ಹಾಗೂ ಬೌಂಡರಿಗಳನ್ನೇ ಬೀಸುವ ಜಾಸ್​, ತಂಡದ ಪ್ರತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ,(ಏಜೆನ್ಸೀಸ್).

ಮೈಲಿಗಲ್ಲುಗಳಲ್ಲಿ ನೀವಿದನ್ನು ಗಮನಿಸಿದ್ದೀರಾ? ಇದರಲ್ಲಿನ ಬಣ್ಣಗಳು ಹೇಳುತ್ತೆ ನಿಮಗೆ ಗೊತ್ತಿರದ ವಿಷಯ | Coloured Milestones

ಮಳೆ ಬಿದ್ದರೆ ಮಾತ್ರ ಪಾರದರ್ಶಕ! ಉಳಿದ ಸಮಯದಲ್ಲಿ ಬಿಳಿ ಬಣ್ಣ; ಅಚ್ಚರಿ ಮೂಡಿಸುತ್ತೆ ‘ಅಸ್ಥಿಪಂಜರ​ ಹೂ’ ವಿಶೇಷತೆ​ | Skeleton Flower

Share This Article

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…

ladies finger Benefits : ಬೆಂಡೆಕಾಯಿ ಒಳ್ಳೆಯದು, ಆದ್ರೆ ಅಪ್ಪಿತಪ್ಪಿಯೂ ಸಹ ಇವ್ರು ಬೆಂಡೆಕಾಯಿ ತಿನ್ನಲೇಬಾರದು..!

ladies finger Benefits : ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…