More

    ರಶ್ಮಿಕಾ ಮಂದಣ್ಣ ಮನೆಯಲ್ಲಿ 4 ಪೆಟ್ಟಿಗೆ ದಾಖಲೆ!

    ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಸತತ 29 ತಾಸು ಪರಿಶೀಲನೆ, ಶೋಧ ಕಾರ್ಯ ನಡೆಸಿದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಶುಕ್ರವಾರ 4 ಪೆಟ್ಟಿಗೆ ದಾಖಲೆಗಳೊಂದಿಗೆ ನಿರ್ಗಮಿಸಿದ್ದಾರೆ.

    ಗುರುವಾರ ತಡರಾತ್ರಿ ಮನೆಗೆ ಆಗಮಿಸಿದ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಯಿತು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಮನ್ ಮಂದಣ್ಣ ದಾಖಲೆ, ಹಣಕಾಸಿನ ವ್ಯವಹಾರ ಎಲ್ಲ ಪಾರದರ್ಶಕವಾಗಿದೆ. ರಶ್ಮಿಕಾ ಸಂಭಾವನೆ ವಿಷಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ನಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ. ಎಲ್ಲದಕ್ಕೂ ಉತ್ತರ ನೀಡಿದ್ದೇವೆ ಎಂದರು.

    ಎರಡನೇ ದಿನವೂ ತಪಾಸಣೆ: ರಶ್ಮಿಕಾ ಮನೆ ಮೇಲೆ ಗುರುವಾರ ಬೆಳಗ್ಗೆ 7.30ಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನದವರೆಗೆ ಶೋಧಕಾರ್ಯ ನಡೆಸಿದರು. ಹೈದರಾಬಾದ್ ಮತ್ತು ತೆಲಂಗಾಣದ ಐಟಿ ಅಧಿಕಾರಿಗಳು ರಶ್ಮಿಕಾ ತಂದೆ ಮದನ್ ಮಂದಣ್ಣ ಅವರ ವಿಚಾರಣೆ ನಡೆಸಿದರು. ಆದಾಯದ ಮೂಲ ಯಾವುದು, ವಿರಾಜಪೇಟೆಯ ವಿಜಯನಗರದಲ್ಲಿದ್ದ ಮನೆಯನ್ನು ಯಾವ ಕಾರಣಕ್ಕೆ ಮಾರಾಟ ಮಾಡಲಾಗಿದೆ. ಪ್ರಸ್ತುತ ಇರುವ ಸೆರೆನಿಟಿ ಹಾಲ್ ಜಾಗವನ್ನು 15 ವರ್ಷಗಳ ಹಿಂದೆ ಯಾರಿಂದ ಖರೀದಿ ಮಾಡಲಾಗಿದೆ. ಜಾಗದ ಅಂದಿನ ಮೌಲ್ಯ ಎಷ್ಟು? ಇಂದಿನ ಮೌಲ್ಯ ಎಷ್ಟು? ಯಾವ ಬ್ಯಾಂಕ್​ನಿಂದ ಸಾಲ ಪಡೆದುಕೊಳ್ಳಲಾಗಿದೆ. ಮೈತಾಡಿ ಗ್ರಾಮದಲ್ಲಿ ಖರೀದಿಸಿದ್ದ 15 ಎಕರೆ ಕಾಫಿ ತೋಟವನ್ನು ಯಾವ ಕಾರಣಕ್ಕಾಗಿ ಮಾರಾಟ ಮಾಡಲಾಗಿದೆ ಎಂದು ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ.

    ಗುರುವಾರ ರಾತ್ರಿ 9 ಗಂಟೆಗೆ ವಿರಾಜಪೇಟೆಯ ಕುಕ್ಲುರು ಮನೆಗೆ ಆಗಮಿಸಿದ ರಶ್ಮಿಕಾ ಅವರನ್ನು ತಡರಾತ್ರಿ 1 ಗಂಟೆವರೆಗೆ ವಿಚಾರಣೆ ನಡೆಸಲಾಗಿದೆ. ಈವರೆಗೆ ಮಾಡಿರುವ ಒಟ್ಟು ಚಿತ್ರಗಳು, ಅದರಲ್ಲಿ ಪಡೆದುಕೊಂಡಿರುವ ಸಂಭಾವನೆ, ತಮ್ಮ ಹೆಸರಿನಲ್ಲಿರುವ ಐಶಾರಾಮಿ 3 ಕಾರುಗಳು, ಬಿಟ್ಟಂಗಾಲದಲ್ಲಿ 5.5 ಎಕರೆ ಜಾಗದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ ವಸತಿ ಶಾಲೆ ಹಾಗೂ ಪೆಟ್ರೋಲ್ ಬಂಕ್​ಗಳ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಎದುರಿಸಿದ ರಶ್ಮಿಕಾ ಶುಕ್ರವಾರ ಬೆಳಗ್ಗೆ ಮಟ್ಟನೂರು ಏರ್​ಪೋರ್ಟ್ ಮೂಲಕ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts