More

    4 ಲಕ್ಷ ರೂ. ವೆಚ್ಚದಲ್ಲಿ ಯೋಧರ ಸ್ಮಾರಕ

    ವಿಜಯವಾಣಿ ವಿಶೇಷ ಅಕ್ಕಿಆಲೂರ

    ಸಮೀಪದ ವರ್ದಿ ಗ್ರಾಮದ ಯುವ ಕೂಲಿಕಾರ್ವಿುಕರು ಅಂದಾಜು 4 ಲಕ್ಷ ರೂ. ವೆಚ್ಚದಲ್ಲಿ ಯೋಧರ ಸ್ಮಾರಕ ನಿರ್ವಿುಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು, ಜ. 26ರ ಗಣರಾಜೋತ್ಸವದಂದು ಲೋಕಾರ್ಪಣೆ ನೆರವೇರಲಿದೆ.

    ಹಾನಗಲ್ಲ ತಾಲೂಕಿನ ನರೇಗಲ್ಲ ಜಿಪಂ ವ್ಯಾಪ್ತಿಯ ವರ್ದಿ ಗ್ರಾಮದ 300 ಜನ ಕೂಲಿ ಮಾಡುವ ಯುವಕರು ಸೇರಿ ಸ್ವಂತ ಹಣದಿಂದ ಯೋಧರ ಸ್ಮಾರಕ ನಿರ್ವಿುಸಿದ್ದಾರೆ. 8 ತಿಂಗಳ ಅವಧಿಯಲ್ಲಿ ಕೂಲಿ ಕೆಲಸದಿಂದ ಬಂದ ಹಣದಲ್ಲಿ ಸ್ವಲ್ಪ ಹಣ ಸ್ಮಾರಕಕ್ಕೆ ಮೀಸಲಿಟ್ಟಿದ್ದಾರೆ. 9 ಅಡಿ ಚೌಕಾಕಾರದ ಯೋಧರ ಸ್ಮಾರಕ ವೃತ್ತ ಈಗ ಎಲ್ಲರ ಗಮನ ಸೆಳೆಯುತ್ತಿದೆ.

    ವರ್ದಿ ಗ್ರಾಮದ ಮಾರುತಿ ವೃತ್ತದಲ್ಲಿ ಈ ಹಿಂದಿದ್ದ ಸಣ್ಣ ಸ್ಮಾರಕವು ರಸ್ತೆ ಸುಧಾರಣೆ ವೇಳೆ ನೆಲಸಮವಾಗಿತ್ತು. ಅಲ್ಲದೆ, ವರ್ದಿ ಗ್ರಾಮದ ಇತಿಹಾಸದಲ್ಲಿ ಈವರೆಗೂ ಒಬ್ಬ ಯುವಕನೂ ಸೈನ್ಯಕ್ಕೆ ಸೇರಿಲ್ಲ ಎಂಬ ಕೊರಗಿತ್ತು. ಹೀಗಾಗಿ ವರ್ದಿ ಯುವಕರು ನಿತ್ಯ ಕೂಲಿಯಿಂದ ಬಂದ 500 ರೂಪಾಯಿಯಲ್ಲಿ 200 ರೂ. ಸ್ಮಾರಕ ನಿರ್ವಣಕ್ಕೆಂದು ತೆಗೆದಿಟ್ಟು ದೇಶಭಕ್ತಿ ಮೆರೆದಿದ್ದಾರೆ.

    ಕಳೆದ ಆಗಸ್ಟ್​ನಲ್ಲಿ ತೀವ್ರ ಮಳೆಯಿಂದ ಅತಿವೃಷ್ಟಿ ಆಗಿದ್ದಾಗ ಕೆಲಸವಿರಲಿಲ್ಲ. ಈ ವೇಳೆ ಬಡ್ಡಿ ರೂಪದಲ್ಲಿ ಹಣ ತಂದು ಸ್ಮಾರಕ ನಿರ್ಮಾಣ ಕಾರ್ಯ ಮುಗಿಸಿದ್ದಾರೆ. ಯೋಧರ ಸ್ಮಾರಕಕ್ಕೆ ವಿದ್ಯುತ್ ದೀಪಾಲಂಕಾರ, ರಾಷ್ಟ್ರ ಧ್ವಜ, ಸೈನಿಕರ ಪ್ರತಿಮೆ ಕಂಗೊಳಿಸುತ್ತಿವೆ. ಸ್ಮಾರಕದ ನಾಲ್ಕು ಕಡೆ ಸಿಂಹಗಳು, ಸೈನ್ಯದ ಸಮವಸ್ತ್ರದಲ್ಲಿ ರಾಷ್ಟ್ರಧ್ವಜ ಹಿಡಿದಿರುವ ಯೋಧರ ಮಧ್ಯೆ ನಾಲ್ಕು ಮುಖದ ಸಿಂಹ ಇರುವ ರಾಷ್ಟ್ರ ಲಾಂಛನದ ಮೇಲೆ ಅಶೋಕ ಚಕ್ರ, ಅದರ ಮೇಲೆ ಧ್ವಜ ಸ್ಥಂಭ ನಿರ್ವಿುಸಲಾಗಿದೆ.

    ಲೋಕಾರ್ಪಣೆ ನಾಳೆ: ಜ. 26ರಂದು ಬೆಳಗ್ಗೆ 7 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವುದರ ಮೂಲಕ ಯೋಧರ ಸ್ಮಾರಕ ಉದ್ಘಾಟನೆಗೊಳ್ಳಲಿದೆ. ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವೇ.ಮೂ. ಉಳವಯ್ಯಶ್ರೀ ಹಿರೇಮಠ ಸಾನ್ನಿಧ್ಯ ವಹಿಸುವರು. ಯೋಧ ಸಿದ್ಧಲಿಂಗೇಶ ಗಂಡುಡಿ, ಯೋಗೇಶ ಲಮಾಣಿ, ಸದಾನಂದ ಹಿರೇಮಠ, ವೆಂಕಟೇಶ ರಾಯ್ಕರ, ಹನುಮಂತಪ್ಪ ಲಮಾಣಿ, ಶಂಕರಗೌಡ ಬನ್ನೂರ, ಬಸವಣೆಪ್ಪ ಹೊಂಬಳಿ, ಕೊಟೆಪ್ಪಗೌಡ ಪಾಟೀಲ, ಚನ್ನಬಸಪ್ಪ ತೆಗ್ಗಿಹಳ್ಳಿ, ಸಹದೇವಪ್ಪ ತೆಗ್ಗಿಹಳ್ಳಿ, ಅಡಿವೆಪ್ಪ ಕಾಳಂಗಿ, ವೀರಭದ್ರಗೌಡ ಪಾಟೀಲ, ಹುತಾತ್ಮ ಯೋಧನ ತಾಯಿ ನಾಗರತ್ನ ಪಾಟೀಲ ಅವರು ಸಾಮೂಹಿಕವಾಗಿ ಸ್ಮಾರಕ ಲೋಕೋರ್ಪಣೆಗೊಳಿಸುವರು.

    ನಾವು ಕಟ್ಟಿದ ಸ್ಮಾರಕದಿಂದ ಪ್ರೇರಣೆ ಪಡೆದು ನಮ್ಮೂರಿನಲ್ಲಿ ಒಬ್ಬ ಯುವಕನಾದರೂ ದೇಶ ಕಾಯಲು ಸೈನ್ಯಕ್ಕೆ ಸೇರಿದರೆ ನಮ್ಮ ಸಂಕಲ್ಪ ಸಾರ್ಥಕಗೊಳ್ಳುತ್ತದೆ. ಭವಿಷ್ಯದಲ್ಲಿ ವರ್ದಿ ಗ್ರಾಮ ಯೋಧರ ಊರು ಎಂಬ ಹೆಸರಿನಿಂದ ಗುರುತಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಈ ಸ್ಮಾರಕವನ್ನು ಎಲ್ಲ ಕೂಲಿ ಕಾರ್ವಿುಕರೇ ಸೇರಿ ನಿರ್ವಿುಸಿದ್ದೇವೆ.
    | ರೇವಣೇಶ ಸಂಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts