4ರಂದು ಬಿಎಸ್‌ವೈ,ವಿಜಯೇಂದ್ರ,ಎಚ್‌ಡಿಕೆ ಬಿರುಸಿನ ಪ್ರಚಾರ

blank
blank

ಚಿತ್ರದುರ್ಗ: ರಾಜ್ಯವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿ ಯೂರಪ್ಪ ಅವರು ಹಾಗೂ ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಇವರೊಂದಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿತ್ರದುರ್ಗ ಹಾಗೂ ಹಿರಿಯೂರಲ್ಲಿ ಪಕ್ಷದ ಪರವಾಗಿ ಮತ ಭೇಟೆ ನಡೆಸಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಬಿಎಸ್‌ವೈ ಹೊಸದುರ್ಗಕ್ಕೆ ಬಂದಿಳಿಯಲಿರುವ ಯಡಿಯೂರಪ್ಪ ಅವರು ಅಲ್ಲಿಯ ಬಿಜೆಪಿ ಅ ಭ್ಯರ್ಥಿ ಎಸ್.ಲಿಂಗಮೂರ್ತಿ ಅವರ ಪರವಾಗಿ ಏರ್ಪಡಿಸಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಧ್ಯಾಹ್ನ 3.30ಕ್ಕೆ ಹೆಲಿಕಾಫ್ಟರ್‌ನಲ್ಲಿ ಹೊಳಲ್ಕೆರೆಗೆ ತೆರಳಲಿದ್ದು,ಪಟ್ಟಣದಲ್ಲಿ ಸಂಜೆ 4.15ಕ್ಕೆ ಏರ್ಪಡಿಸಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಭ್ಯರ್ಥಿ,ಬಿಜೆಪಿ ಶಾಸಕ ಎಂ.ಚಂದ್ರಪ್ಪ ಮತ್ತಿತರರು ಇರುತ್ತಾರೆ.


ಅಲ್ಲಿಂದ ಯಡಿಯೂರಪ್ಪ ಅವರು ಸಂಜೆ 5.45 ಚಿತ್ರದುರ್ಗಕ್ಕೆ ಬಂದಿಳಿಯಲಿದ್ದು,ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಸಂಜೆ 6ಕ್ಕೆ ಏರ್ಪಡಿಸಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ,ಶಾಸಕ ಜಿ. ಎಚ್.ತಿಪ್ಪಾರೆಡ್ಡಿ,ಬಿ.ವೈ.ವಿಜಯೇಂದ್ರ ಮತ್ತಿತರ ಪಕ್ಷದ ಪ್ರಮುಖರು ಭಾಗವಹಿಸುವರು.


ಈ ಸಭೆಯ ಬಳಿಕ ಯಡಿಯೂರಪ್ಪ ಅವರು ದಾವಣಗೆರೆಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವಿಜಯೇಂದ್ರ ಅವರು ಚಿತ್ರ ದು ರ್ಗದ ಸಭೆಯ ಬಳಿಕ ಹಿರಿಯೂರಲ್ಲಿ ಸಂಜೆ 7.15ಕ್ಕೆ ಏರ್ಪಡಿಸಿರುವ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪರ ಮತಯಾಚಿಸುವರು.


ಎಚ್.ಡಿ.ಕುಮಾರ ಸ್ವಾಮಿ ಅವರು ಹೊಸದುರ್ಗದಲ್ಲಿ ಮಧ್ಯಾಹ್ನ 12ಕ್ಕೆ ಏರ್ಪಡಿಸಿರುವ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ತಿಪ್ಪೇ ಸ್ವಾಮಿ ಹಾಗೂ ಹಿರಿಯೂರಲ್ಲಿ ಮಧ್ಯಾಹ್ನ 1.30ಕ್ಕೆ ಆಯೋಜಿಸಿರುವ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಪರ ಯಾ ಚಿಸಲಿದ್ದಾರೆ.



TAGGED:
Share This Article

ಖಾಲಿ ಹೊಟ್ಟೆಯಲ್ಲಿ ಶುಂಠಿ ತಿನ್ನಿರಿ! ಈ 6 ಆರೋಗ್ಯ ಪ್ರಯೋಜನಗಳು ಪಡೆಯಿರಿ.. | Ginger

Ginger: ಇಂದಿನ ಆಧುನಿಕ ಜಗತ್ತಿನಲ್ಲಿ ವೇಗದ ಜೀವನದಲ್ಲಿ ಮನುಷ್ಯನ ದೇಹ ರೋಗದ ಗೂಡಾಗುತ್ತಿದೆ. ಜಡ ಜೀವನ…

ಸಾಲದ ಹೊರೆಯಿಂದ ಬಳಲುತ್ತಿದ್ರೆ ಶ್ರಾವಣ ಮಾಸದಲ್ಲಿ ಈ ಸಣ್ಣ ಕೆಲಸ ಮಾಡಿ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಿರಿ.. | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…