ಬೆಳಗಾವಿ: ಸಂವಿಧಾನದ 370ನೇ ವಿಯನ್ನು ರದ್ದು ಪಡಿಸುವ ಮೂಲಕ ಕೇಂದ್ರ ಸರ್ಕಾರ ಭಾರತದ ಅಖಂಡ ಮತ್ತು ಒಕ್ಕೂಟ ವ್ಯವಸ್ಥೆ ಮತ್ತಷ್ಟು ಬಲಪಡಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಲ್ಲಿನ ಸಂಪಗಾಂವ ರಸ್ತೆಯಲ್ಲಿನ ಅಂಗಡಿ ತಾಂತ್ರಿಕ ಸಂಸ್ಥೆಯಲ್ಲಿ ಬಿಜೆಪಿ ಮಹಾನಗರ ಘಟಕ ಶುಕ್ರವಾರ ಆಯೋಜಿಸಿದ್ದ ಒಂದು ರಾಷ್ಟ್ರ-ಒಂದು ಸಂವಿಧಾನ ಎಂಬ ರಾಷ್ಟ್ರೀಯ ಏಕತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಜಮು-ಕಾಶ್ಮೀರದಲ್ಲಿನ ಹಿತಾಸಕ್ತಿಗಳ ಮುಂದೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯೇ ಮಂಡಿಯೂರುವ ಹಾಗೂ ಬಾಲವೇ ಇಡೀ ದೇಹ ಅಲ್ಲಾಡಿಸುವ ಅಸಹಾಯಕತೆ ತಪ್ಪಿದೆ ಎಂದರು.
ಜಮ್ಮು ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡಲಿಲ್ಲವೆಂದರೆ ಅಲ್ಲಿನ ನೌಕರರಿಗೆ ತಿಂಗಳ ಸಂಬಳ ಕೊಡಲು ಸರ್ಕಾರದಿಂದ ಸಾಧ್ಯವಿಲ್ಲ. ಪ್ರತಿ ವರ್ಷವೂ ವಿಶೇಷ ಪ್ಯಾಕೇಜ್ ನೀಡದಿದ್ದರೆ ಇಲ್ಲಿನ ಯುವ ಜನತೆ ಭಾರತದ ವಿರುದ್ಧ ತಿರುಗಿಬೀಳುತ್ತಾರೆ ಎಂಬ ಬೆದರಿಕೆ ಇಷ್ಟು ದಿನ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರದಿಂದ ವಿನಂತಿ ಮಾಡುವ ವರ್ತನೆಗೆ ಇತಿಶ್ರೀ ಹಾಡಲು ಸಾಧ್ಯವಾಯಿತು ಎಂದರು.
ಸಂಸದರನ್ನು ಅಂಗಡಿ ತಾಂತ್ರಿಕ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಏಕತಾ ಅಭಿಯಾನದ ಸಹಸಂಚಾಲಕ, ಮಾಜಿ ಶಾಸಕ ಸಂಜಯ ಪಾಟೀಲ, ಶಾಸಕ ಅಭಯ ಪಾಟೀಲ, ಎಂ.ಬಿ.ಝಿರಲಿ, ಈರಣ್ಣ ಕಡಾಡಿ, ಆರ್.ಎಸ್.ಮುತಾಲಿಕ ಮತ್ತಿತರರಿದ್ದರು.
ಬುದ್ಧಿಜೀವಿಗಳು ಆಗೆಲ್ಲಿದ್ರೂ!: ದೇಶದಲ್ಲಿ ಸಂವಿಧಾನದ ಉಲ್ಲಂಘನೆ ಬಗ್ಗೆ ಭಾಷಣ ಮಾಡುವ ಬುದ್ಧಿಜೀವಿಗಳು, ಅದೇ ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಜಮ್ಮು-ಕಾಶ್ಮೀರದಲ್ಲಿರದ ಸಮಾನತೆ, ಬಾಲ್ಯ ವಿವಾಹ, ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲದಿರುವಾಗ ಹಾಗೂ ಮಹಿಳೆಯರು ಹಾಗೂ ಮಕ್ಕಳ ವಿರೋ ನೀತಿಗಳು ಜಾರಿಯಿದ್ದಾಗ ಎಲ್ಲಿದ್ರೂ, ಆ ಸಂದರ್ಭದಲ್ಲೇಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಆಯ್ಕೆಯಾಗಿ ಜನಪ್ರತಿನಿಗಳಾದ ನಾವೆಲ್ಲ ಅಖಂಡ ಭಾರತ, ಭಾರತದ ಏಕತೆ ಹಾಗೂ ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎಂದೆ ಪ್ರಮಾಣ ವಚನ ಸ್ವೀಕರಿಸುತ್ತೇವೆ. ಈವರೆಗೂ ಸಂವಿಧಾನ ದೇಶದಲ್ಲಿ ಎಲ್ಲ ಪ್ರದೇಶದಲ್ಲೂ ಅನ್ವಯವಾಗುತ್ತಿರಲಿಲ್ಲ. 370 ವಿ ರದ್ದತಿಯಿಂದ ಪ್ರಮಾಣ ವಚನ ಅರ್ಥಬದ್ಧವಾದಂತಿದೆ ಎಂದು ಅಭಿಪ್ರಾಯಪಟ್ಟರು.